ಮೈಸೂರು: ದಸರಾ ಮಹೋತ್ಸವಕ್ಕೂ ( Mysore Dasara 2022 ) ಮುನ್ನ, ಈ ಬಾರಿ ಎಲ್ಲಾ ಮಾದರಿಯ ಪಾಸ್ ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದರು. ಈ ಬಳಿಕ ಗೋಲ್ಡ್ ಪಾಸ್ ಗಾಗಿ ( Gold Pass ) ಒತ್ತಡ ಹೆಚ್ಚಾಗಿದೆ ಎಂದಿದ್ದರು. ಇದೀಗ ಗೋಲ್ಡ್ ಕಾರ್ಡ್ ವಿತರಣೆಗೆ ( Gold Card Release ) ಅವಕಾಶ ನೀಡಲಾಗಿದೆ. ಈ ಮೂಲಕ ದಸರಾ ವೀಕ್ಷಣೆಗೆ ತೆರಳುವಂತ ಪ್ರವಾಸಿಗರಿಗೆ, ವಿದೇಶಿಗರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಜಿಲ್ಲಾಡಳಿತದಿಂದ ಮಾಹಿತಿ ನೀಡಲಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾಗೆ ದೇಶಿ, ವಿದೇಶಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋಲ್ಡ್ ಕಾರ್ಡ್ ವಿತರಿಸಲಾಗುತ್ತಿದೆ. ಪ್ರವಾಸಿಗರು www.mysoredasara.gov.in ಜಾಲತಾಣದಲ್ಲಿ ಪಾಸ್ ಗಾಗಿ ಬುಕ್ ಮಾಡಬಹುದು ಎಂದಿದೆ.
ಅಂದಹಾಗೇ ಈ ಬಾರಿಯ ದಸರಾ ಗೋಲ್ಡ್ ಕಾರ್ಡ್ ಪಡೆಯೋದಕ್ಕೆ ರೂ.4,999 ದರವನ್ನು ನಿಗದಿಪಡಿಸಲಾಗಿದೆ. ಆನ್ ಲೈನ್ ಜಾಲತಾಣದಲ್ಲಿ ಈ ಪಾಸ್ ಗಾಗಿ ಅರ್ಜಿ ಸಲ್ಲಿಸಬಹುದು. ಒಬ್ಬರಿಗೆ ಒಂದು ಬಾರಿ ಎರಡು ಗೋಲ್ಡ್ ಕಾರ್ಡ್ ಖರೀದಿಸಲು ಅವಕಾಶ ನೀಡಲಾಗಿದೆ.
ಇನ್ನೂ ಗೋಲ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದಂತ ದೇಶಿ, ವಿದೇಶಿ ಪ್ರವಾಸಿಗರು ನಾಳೆಯಿಂದ ಕೆ ಎಸ್ ಡಿ ಟಿಸಿಯ ಮಯೂರ ಹೋಟೆಲ್ ಬಳಿಯಲ್ಲಿ ಗೋಲ್ಡ್ ಕಾರ್ಡ್ ಪಡೆಯಬಹುದು. ಆದ್ರೇ ಬೆಳಿಗ್ಗೆ 11 ರಿಂದ ಸಂಜೆ 5.30 ಪಾಸ್ ಗೆ ಅರ್ಜಿ ಸಲ್ಲಿಸಿದ್ದವರು ಪಡೆಯಲು ಮಾತ್ರವೇ ಅವಕಾಶವಿದೆ.
ಗೋಲ್ಡ್ ಕಾರ್ಡ್ ಪಡೆದವರಿಗೆ ಈ ಎಲ್ಲಾ ವೀಕ್ಷಣೆ ಉಚಿತ
ಗೋಲ್ಡ್ ಕಾರ್ಡ್ ಪಡೆದಂತ ಪ್ರವಾಸಿಗರು ದಸರಾ ಜಂಬೂಸವಾರಿಯ ಮೆರವಣಿಗೆ ವೀಕ್ಷಿಸಬಹುದು. ಬನ್ನಿ ಮಂಟಪದಲ್ಲಿನ ಪಂಜಿನ ಕವಾಯತು ವೀಕ್ಷಿಸಬಹುದು. ಜೊತೆಗೆ ಪ್ರವಾಸಿ ತಾಣಗಳಿಗೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಮಾಲ್ ನಲ್ಲಿ ಸಿನಿಮಾ ಪ್ರಮೋಷನ್ ವೇಳೆ ಇಬ್ಬರು ಮಲಯಾಳಂ ನಟಿರ ಮೇಲೆ ಲೈಂಗಿಕ ದೌರ್ಜನ್ಯ
ಅದರಲ್ಲೂ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ತಾಯಿ ದರ್ಶನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೆಂಟ್ ಫಿಲೋಮಿನಾ ಚರ್ಚ್, ರೈಲ್ವೆ ಮ್ಯೂಸಿಯಂ ಹಾಗೂ ಕೆ ಆರ್ ಎಸ್ ಜಲಾಶಯವನ್ನು ವೀಕ್ಷಿಸಲು ಅವಕಾಶವಿದೆ.