ಯುಸ್: ಮೂರು ವರ್ಷದ ಮಗುವೊಂದು ಬಂದೂಕು ಹಿಡಿದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದರಿಂದ ಹಾರಿದ ಗುಂಡು ತಾಯಿಗೆ ತಗುಲಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಬುಧವಾರ ಯುಸ್ನ ದಕ್ಷಿಣ ಕೆರೊಲಿನಾದಲ್ಲಿ ನಡೆದಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಮೃತ ಮಹಿಳೆಯನ್ನು 33 ವರ್ಷದ ಕೋರಾ ಲಿನ್ ಬುಷ್ ಎಂದು ಗುರುತಿಸಲಾಗಿದೆ. ಬುಷ್ ಕುಟುಂಬ ಸ್ಪಾರ್ಟನ್ಬರ್ಗ್ನಲ್ಲಿ ವಾಸಿಸುತ್ತಿದೆ. ಬುಧವಾರ ತನ್ನ 3 ವರ್ಷದ ಮಗ ಬಂದೂಕು ಹಿಡಿದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಬುಷ್ಗೆ ತಗುಲಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಕೆಲ ಹೊತ್ತಿನಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಯುಸ್ನಲ್ಲಿ ಇಂತಹ ಘಟನೆಗಳು ಮುನ್ನಲೆಗೆ ಬರುತ್ತಲೇ ಇವೆ. ವರದಿಯ ಪ್ರಕಾರ, US ನಲ್ಲಿ ಮಕ್ಕಳಿಂದ ಕನಿಷ್ಠ 194 ಉದ್ದೇಶಪೂರ್ವಕವಲ್ಲದ ಗುಂಡಿನ ದಾಳಿಗಳು ನಡೆದಿವೆ. ಇದರ ಪರಿಣಾಮವಾಗಿ 82 ಸಾವುಗಳು ಮತ್ತು 123 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
PAY CM ಬಳಿಕ ಕೈನಿಂದ ಮತ್ತೊಂದು ಅಸ್ತ್ರ: ಆಟೋಗಳ ಮೇಲೆ ಪೋಸ್ಟರ್ ಹಚ್ಚಿ 40% ಸರ್ಕಾರವೆಂದು ಕಾಂಗ್ರೆಸ್ ಆಕ್ರೋಶ
BIG BREAKING NEWS: ಮಾಜಿ ಸಿಎಂ ಬಿಎಸ್ವೈ ಲಂಚ ಪ್ರಕರಣದ ತನಿಖೆಗೆ ‘ಮಧ್ಯಂತರ ತಡೆ’ ನೀಡಿದ ಸುಪ್ರಿಂಕೋರ್ಟ್