ಬೆಂಗಳೂರು: ಈಗಾಲೇ ರಾಜ್ಯ ಸರ್ಕಾರದಿಂದ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ 15,000 ಶಿಕ್ಷಕರ ನೇಮಕಾತಿಗೆ ( Karnataka Teacher Recruitment ) ಅಧಿಸೂಚನೆ ಹೊರಡಿಸಲಾಗಿತ್ತು. ಆ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಬೆನ್ನಲ್ಲೇ ಇದೀಗ 2,500 ಶಿಕ್ಷಕರ ನೇಮಕಾತಿಗೆ ( Recruitment of Teachers ) ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಹೇಳಿದ್ದಾರೆ.
ಎಣ್ಣೆ ಪ್ರಿಯರೇ, ಈ ‘ಆಲ್ಕೋಹಾಲ್’ ಕುಡಿದ್ರೆ ‘ಹೃದಯ ಸಂಬಂಧಿ ಕಾಯಿಲೆ’ಗಳು ದೂರವಾಗುತ್ವಂತೆ ; ಅಧ್ಯಯನ
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ( Teacher Jobs ) ಮಾಡಿಕೊಳ್ಳಲಾಗುತ್ತದೆ. ಸಹ ಶಿಕ್ಷಕರು – 2,200 ಹುದ್ದೆಗಳು. ದೈಹಿಕ ಶಿಕ್ಷಣ ಶಿಕ್ಷಕರು – 200 ಹುದ್ದೆಗಳು. ವಿಶೇಷ ಶಿಕ್ಷಕರು – 100 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಸಹ ಶಿಕ್ಷಕರು – 2,200 ಹುದ್ದೆಗಳು.
ದೈಹಿಕ ಶಿಕ್ಷಣ ಶಿಕ್ಷಕರು – 200 ಹುದ್ದೆಗಳು.
ವಿಶೇಷ ಶಿಕ್ಷಕರು – 100 ಹುದ್ದೆಗಳು.@BSBommai @BJP4Karnataka
— B.C Nagesh (@BCNagesh_bjp) September 12, 2022
ಅಂದಹಾಗೇ ಕಳೆದ 15,000 ಶಿಕ್ಷಕರ ಹುದ್ದೆಯ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿರಲಿಲ್ಲ. ವಿಷಯ ಶಿಕ್ಷಕರನ್ನು ಅಷ್ಟೇ ನೇಮಕ ಮಾಡಲಾಗಿತ್ತು. ಈಗ ಸಹ ಶಿಕ್ಷಕರು ಸೇರಿದಂತೆ 200 ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಲಾಗುತ್ತದೆ. ಇದಲ್ಲದೇ 100 ವಿಶೇಷ ಶಿಕ್ಷಕರನ್ನು ಕೂಡ ನೇಮಕ ಮಾಡಿಕೊಳ್ಳಲಾಗುತ್ತಿದೆ.