ಮಂಡ್ಯ: ಇಂದು ಐತಿಹಾಸಿಕ ದಿನಕ್ಕೆ ಮಂಡ್ಯದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಾಕ್ಷಿಯಾಯಿತು ( Kokkare Bellur Bird Sanctuary ). ಡೆಹರಾಡೂನ್ ನಿಂದ ಬಂದ ವಿಶೇಷ ತಜ್ಞ ವೈದ್ಯರ ತಂಡ ಕಾಲರ್ ಟ್ರ್ಯಾಕರ್ ಐಡಿ ( Caller Tracker ID ) ಅಳವಡಿಸಿ ಸಂತಸ ಪಟ್ಟರು.
ವಿಶ್ವ ವಿಖ್ಯಾತ ಪಕ್ಷಿಧಾಮಗಳ ಪೈಕಿ ಮಂಡ್ಯದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಹವೊಂದು.. ದೇಶ ವಿದೇಶದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ನೆಲೆಸುತ್ವೆ ಸೀಸನ್ ವೈಸ್ ನೆಲೆ ನಿಂತು ಬಳಿಕ ಬೇರೆಡೆಗೆ ಹಾರಿ ಹೋಗುತ್ವೆ.. ಅದೇ ರೀತಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಸೆಂಟ್ರಲ್ ಅಟ್ರ್ಯಾಕ್ಷನ್ ಅಂದ್ರೆ ಅದು ಸ್ಪಾಟ್ ಬಿಲ್ಲಿಡ್ ಪೆಲಿಕಾನ್ ಪಕ್ಷಿ.. ಅದು ಅತಿ ಅಪರೂಪದ ಪಕ್ಷಿ ಕನ್ನಡದಲ್ಲಿ ಇದಕ್ಕೆ ಹೆಜ್ಜಾರ್ಲೆ ಅಂತ ಸಹ ಕರೆಯುತ್ತಾರೆ.. ಈ ಪಕ್ಷಿ ಎಲ್ಲಿಂದ ಬರುತ್ತೆ ಬಳಿಕ ಇದು ಎಲ್ಲಿಗೆ ಹಾರಿ ಹೋಗುತ್ತೆ ಎನ್ನುವ ಅಂಶ ಯಾರಿಗೂ ಗೊತ್ತಿರ್ಲಿಲ್ಲ ಅದಕ್ಕೆ ಇಂದು ಡೆಹರಾಡೂನ್ ನಿಂದ ವೈಲ್ಡ್ ಲೈಫ್ ಇನ್ಸ್ ಟಿ ಟ್ಯೂಶನ್ ನಿಂದ ವಿಶೇಷ ವಿಜ್ಞಾನಿ ತಂಡ ಬಂದು ಹಕ್ಕಿಗಳಿಗೆ ಕಾಲರ್ ಟ್ರ್ಯಾಕರ್ ಐಡಿಯನ್ನ ಎರೆಡು ಪಕ್ಷಿಗಳಿಗೆ ಅಳವಡಿಕೆ ಮಾಡಲಾಗಿದೆ.
BIGG NEWS : 2023 ರ ವಿಧಾನಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಕೊನೆಯ ಚುನಾವಣೆ : ನಿಖಿಲ್ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ
ಗ್ರೀಕ್ ನಿಂದ ಬಂತು ವಿಶೇಷ ಜಿಪಿಎಸ್ ಟ್ರ್ಯಾಕರ್, ಪಕ್ಷಿ ಸಂಚಾರದ ಇಂಚಿಂಚು ಮಾಹಿತಿ ಈಗ ಅರಣ್ಯಾಧಿಕಾರಾಗಳಿಗೆ ಲಭ್ಯ
ಹೌದು ಇಂದು ಐತಿಹಾಸಿಕ ದಿನಕ್ಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸಾಕ್ಷಿಯಾಯ್ತು.. ಹೆಜ್ಜಾರ್ಲೆ ಹಕ್ಕಿಯ ಯಾವ ದೇಶಕ್ಕೆ ಯಾವ ಪ್ರಾಂತ್ಯಕ್ಕೆ ಸೇರಿದ್ದು ಎಂಬುದರ ಗೊಂದಲವಿತ್ತು ಈ ಹಿನ್ನಲೆ ಡೆಹರಾ ಡೂನ್ ನಿಂದ ಬಂದ ವಿಶೇಷ ತಜ್ಞ ವೈದ್ಯರ ತಂಡ ಇಂದು ಎರೆಡು ಸ್ಪಾಟ್ ಬಿಲ್ಲಿಡ್ ಪಿಲಿಕಾನ್ ಪಕ್ಷಿಗೆ ಎರೆಡು ಜಿಪಿಎಸ್ ಟ್ರ್ಯಾಕರ್ ಗಳನ್ನ ರೆಕ್ಕೆಗೆ ಅಳವಡಿಸಲಾಯ್ತು.. ಗ್ರೀಕ್ ನಿಂದ ತಂಡ ಈ ವಿಶಿಷ್ಟ ಟ್ರ್ಯಾಕರ್ ಐಡಿಯನ್ನ ಪಿಲಿಕಾನ್ ಪಕ್ಷಿಗೆ ಅಳವಡಿಕೆ ಮಾಡಲಾಗಿದೆ.
Bharat Jodo yatra: ತಮಿಳುನಾಡ ಕುವರಿಯನ್ನೇ ವರಿಸ್ತಾರಂತೆ ರಾಹುಲ್ ಗಾಂಧಿ!
ಐತಿಹಾಸಿಕ ದಿನಕ್ಕೆ ಸಾಕ್ಷಿಯಾದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ, ಡೆಹರಡೂನ್ ನಿಂದ ಬಂದ ತಜ್ಞರಿಂದ ಹೆಜ್ಜಾರ್ಲೆಗೆ ಕಾಲರ್ ಐಡಿ ಅಳವಡಿಕೆ
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಿಪಿಎಸ್ ಕಾಲರ್ ಟ್ರ್ಯಾಕರ್ ನ ಅಳವಡಿಸಿದ್ದು ಈ ಜಿಪಿಎಸ್ ಸೋಲಾರ್ ಸಹಾಯದೊಂದಿಗೆ ಚಾರ್ಜ್ ಆಗಲಿದ್ದು ಕನಿಷ್ಠ ನಾಲ್ಕು ವರ್ಷಗಳ ಕಾಲ ಟ್ರ್ಯಾವೆಲ್ ಹಿಸ್ಟರಿ ಪಿನ್ ಟು ಪಿನ್ ಇನ್ಫಾಮೇಷನ್ ನ ಅರಣ್ಯಾಧಿಕಾರಿಗಳಿಗೆ ಕಳುಹಿಸಿ ಕೊಡುತ್ತೆ.. ಕೊಕ್ಕೆರೆ ಬೆಳ್ಳೂರಿಗೆ ಅಕ್ಟೋಬರ್ ತಿಂಗಳಲ್ಲಿ ಕಾಣಿಸಿಕೊಳ್ಳೊ ಈ ವಿಶೇಷ ಪಕ್ಷಿ ಎರೆಡು ತಿಂಗಳ ಬಳಿಕ ಮಾಯವಾಗುತ್ತೆ.. ಕರ್ನಾಟಕ, ತಮಿಳುನಾಡು, ಮಲೇಶೀಯಾ, ಮಯನ್ಮಾರ್ ಹಾಗೂ ಶ್ರೀಲಂಕದಲ್ಲಿ ಮಾತ್ರ ಈ ಸಂತತಿ ಕಾಣ ಸಿಗಲಿದೆ.
BIG NEWS: ‘ಹುತಾತ್ಮ ಅರಣ್ಯ ಸಿಬ್ಬಂದಿ’ಗಳ ಪರಿಹಾರದ ಮೊತ್ತ 30 ರಿಂದ 50 ಲಕ್ಷಕ್ಕೆ ಹೆಚ್ಚಳ – ಸಿಎಂ ಬೊಮ್ಮಾಯಿ ಘೋಷಣೆ
ಈಗಾಗಲೇ ಸ್ಪಾಟ್ ಬಿಲ್ಲಿಡ್ ಪಿಲಿಕಾನ್ ಪಕ್ಷಿಯ ಸಂತತಿ ಎಲ್ಲೆಡೆ ಕಣ್ಮರೆಯಾಗುತ್ತಿದೆ. ಈ ಪಕ್ಷಿಯ ಸಂತತಿಯನ್ನ ಕಾಪಾಡಿ ಕೊಳ್ಳಲು ವೈಲ್ಡ್ ಲೈಫ್ ಇನ್ಸ್ ಟಿ ಟ್ಯೂಟ್ ಆಫ್ ಡೆಹರಾ ಡೂನ್ ಮುಂದಾಗಿತ್ತು. ಇಂದು ಭಾರತ ದೇಶದಲ್ಲೇ ಮೊದಲ ಬಾರಿಗೆ ಕಾಲರ್ ಟ್ರ್ಯಾಕರ್ ಐಡಿ ಅಳವಡಿಸಿದ್ದು ಇನ್ಮೇಲೆ ಈ ಪಕ್ಷಿ ಕಂಪ್ಲೀಟ್ ಟ್ರ್ಯಾವೆಲ್ ಹಿಸ್ಟರಿ ಡಾಟ ಈಗ ಸಿಗಲಿದೆ. ಒಟ್ಟಾರೆ ಇಂದು ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಬಂದ ಡೆಹರಾಡೂನ್ ತಂಡ ಕಾಲರ್ ಟ್ರ್ಯಾಕರ್ ಐಡಿ ಅಳವಡಿಸಿ ವಿಶೇಷ ಸಾಧನೆಯನ್ನ ಮಾಡಿ ಸಂತಸ ಪಟ್ಟರು.
ವರದಿ: ಗಿರೀಶ್ ರಾಜ್, ಮಂಡ್ಯ