ನವದೆಹಲಿ: ನವೀಕೃತ ಸೆಂಟ್ರಲ್ ವಿಸ್ತಾದ ( central vista ( ಕೆಲವು ಭಾಗ, ಕರ್ತವ್ಯ ಪಥ ಹಾಗೂ ಇಂಡಿಯಾ ಗೇಟ್ ( India Gate ) ಸನಿಹ ಪ್ರತಿಸ್ಠಾಪಿಸಲಾಗಿರುವ ನೇತಾಜಿ ಸಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು, ಇಂದು ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಲೋಕಾರ್ಪಣೆ ಮಾಡಲಿದ್ದಾರೆ.
Bengaluru Rain: ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಳೆ: ಜೂನ್ ನಿಂದ ಸೆ.6ರವರೆಗೆ 103 ಸೆ ಮೀ ಮಳೆ ದಾಖಲು
ನವೀಕೃ ಸೆಂಟ್ರಲ್ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ಮೋದಿ ವಿಜಯ್ ಚೌಕ್ ನಿಂದ ಇಂಡಿಯಾ ಗೇಟ್ ವರೆಗಿನ ಭಾಗವನ್ನು ಇಂದು ಉದ್ಘಾಟಿಸಲಿದ್ದಾರೆ. ಈ ನವೀಕೃತ ಸೆಂಟ್ರಲ್ ವಿಸ್ತಾದಲ್ಲಿ ರಾಜ್ಯವಾರು ಆಹಾರ ಮಳಿಗೆಗಳು, ಕೆಂಪು ಗ್ರಾನೈಟ್ ಪಾದಚಾರಿ ಮಾರ್ಗಗಳು, ಸುತ್ತಲೂ ಹಸಿರು ಉದ್ಯಾನವನಗಳು ಪ್ರಮುಖ ಆಕರ್ಷಣೆಯಾಗಿವೆ. ಇಂದು ಪ್ರಧಾನಿ ಮೋದಿ ನವೀಕೃತ ಸೆಂಟ್ರಲ್ ವಿಸ್ತಾ ಉದ್ಘಾಟಿಸಿದ ಬಳಿಕ ಸಾರ್ವಜನಿಕರು ಮುಕ್ತವಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.
ಅಂದಹಾಗೇ, 20 ತಿಂಗಳ ಹಿಂದೆ ನವೀಕರಣ ಕಾಮಗಾರಿ ಆರಂಭವಾಗಿತ್ತು. ಗಣರಾಜ್ಯ ಪರೇಡ್ ನಡೆಯುವ ಇಂಡಿಯಾ ಗೇಟ್ ಎದುರಿನ ಪಥದ ಹೆಸರನ್ನು ರಾಜಪಥ ಬದಲು ಕರ್ತವ್ಯ ಪಥ ಎಂದು ಬದಲಿಸಿ, ದೆಹಲಿ ಪಾಲಿಕೆ ನಿರ್ಧಾರ ಕೈಗೊಂಡಿದೆ.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಸೆಂಟ್ರಲ್ ವಿಸ್ತಾ ವೈಭವದ ವಿಶೇಷತೆ
ನವೀಕೃತ ಸೆಂಟ್ರಲ್ ವಿಸ್ತಾದಲ್ಲಿ 3.9 ಲಕ್ಷ ಚ.ಮೀ ಹಸಿರು ಲಾನ್ ಇದೆ. 15.5 ಕಿ ಮೀ ಗ್ರಾನೈಟ್ ಪುಟ್ ಪಾತ್ ನಿರ್ಮಿಸಲಾಗಿದೆ. ಇದಲ್ಲದೇ ಇಲ್ಲಿಗೆ ಆಗಮಿಸೋ 1125 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 900 ಹೊಸ ಬೆಳಕಿನ ಕಂಬಳಗನ್ನು ಹಾಕಲಾಗಿದ್ದು, 19 ಎಕರೆ ಕಾಲುವೆ ಪ್ರದೇಶ ಅಭಿವೃದ್ಧಿ ಪಡಿಸಲಾಗಿದೆ.