ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಉಂಟಾಗದಂತ ಅವಾಂತರದಿಂದಾಗಿ ಐಟಿ-ಬಿಟಿ ಕಂಪನಿಗಳು ಬೆಂಗಳೂರು ತೊರೆಯೋ ಎಚ್ಚರಿಕೆಯನ್ನು ಸಿಎಂಗೆ ಪತ್ರದಲ್ಲಿ ಎಚ್ಚರಿಕೆ ನೀಡಿದ್ದವು. ಈ ಹಿನ್ನಲೆಯಲ್ಲಿ ಇಂದು ಸಚಿವ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದಲ್ಲದೇ ತಿಂಗಳಿಗೊಮ್ಮೆ ಐಟಿ ವಲಯದ ಮುಖ್ಯಸ್ಥರ ಜೊತೆಗೆ ಸಭೆ ನಡೆಸೋ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಇಂದು ಬೆಂಗಳೂರಿನ ಐಟಿ ಬಿಟಿ ಪ್ರಮುಖರ ಜೊತೆಗೆ ಸಭೆಯ ನಡೆಸಿದ ಬಳಿಕ ಮಾತನಾಡಿದಂತ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರು, ಇಂದಿನ ಸಭೆಯಲ್ಲಿ ಅರ್ಕಾ, ನ್ಯಾಸ್ ಕಮ್ ಸೇರಿದಂತೆ ಅನೇಕ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿದ್ದರು. ಸಭೆಯಲ್ಲಿ ಪ್ರಮುಖವಾದ ಸಲಹೆ ಪಡೆಯಲಾಯಿತು. ಪ್ಲಾನಿಂಗ್ ನಿಂದ ಹಿಡಿದು ಎಲ್ಲಾ ರೀತಿಯ ಕ್ರಮ ವಹಿಸುವ ವಿಚಾರದ ಬಗ್ಗೆ ಮಾಡಲಾಯಿತು. ಅವರ ಸಲಹೆಗಳನ್ನು ಕೂಡ ಸ್ವೀಕರಿಸಲಾಯ್ತು ಎಂದರು.
BIG NEWS: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ
ವಿಶೇಷವಾಗಿ ಮಹದೇವಪುರ ಹಾಗೂ ಅಕ್ಕ ಪಕ್ಕದ ಭಾಗದಲ್ಲಿ ಬರೀ ನೀರಿನ ಸಮಸ್ಯೆ ಅಲ್ಲದೇ ಬೇರೆಯ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ. ಮಳೆ ಬಂದರೇ ಬೆಂಗಳೂರಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಭಿವೃದ್ಧಿ ಮಾಡಬೇಕಾಗಿದೆ. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಅಭಿವೃದ್ಧಿ ಕೆಲಸ ಆಗುತ್ತೆ. ಸರ್ಕಾರ ಮಹದೇವಪುರ ರಕ್ಷಣೆಗೆ ನಿಂತಿದೆ. ತಿಂಗಳಿಗೊಂದು ಐಟಿ ಬಿಟಿ ಮುಖ್ಯಸ್ಥರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡುತ್ತೇವೆ. ಅವರ ಅಹವಾಲು ಆ ಸಭೆಯಲ್ಲಿ ಸ್ವೀಕರಿಸುತ್ತೇವೆ ಎಂದರು.
ಡಿಜೆಸ್ಟಾರ್ ಮ್ಯಾನೇಜ್ಮೆಂಟ್ ಗೆ ವಿಶೇಷವಾದ ವ್ಯವಸ್ಥೆ ಮಾಡಬೇಕಿದೆ. ಎಲೆಕ್ಟ್ರಾನ್ ಸಿಟಿ ಹಾಗೂ ಹೊಸೂರು ಭಾಗದಂತೆ ಈ ಭಾಗದಲ್ಲಿ ಮೆಟ್ರೋ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ. ಕಾವೇರಿ ಐದನೇ ಹಂತದ ನೀರು ಈ ಭಾಗದಲ್ಲಿ ಕೊಡಲು ಚಿಂತನೆ ಮಾಡಿದ್ದೇವೆ ಎಂದು ಹೇಳಿದರು.
ರಾಜಕೀಯ ಪಕ್ಷಗಳಿಗೆ ದೇಣಿಗೆ: ದೆಹಲಿ, ಗುಜರಾತ್, ಉತ್ತರ ಪ್ರದೇಶ, ಹರಿಯಾಣದಲ್ಲಿ ಐಟಿ ದಾಳಿ
ಇನ್ನೂ ಮೂಲ ಸೌಕರ್ಯ ಬಗ್ಗೆ ಐಟಿ ವಲಯ ಅಸಮಾಧಾನ ವಿಚಾರವಾಗಿ ಮಾತನಾಡಿದಂತ ಅವರು, ಬೆಂಗಳೂರಿನ ಬಗ್ಗೆ ಅಪಪ್ರಚಾರ ನಾವು ಮಾಡಿಲ್ಲ. ಯಾರೋ ಎಲ್ಲಿದಲೂ ಮಾತನಾಡಿದ್ದಾರೆ. ಇದು ನಮ್ಮ ಅಭಿಮಾನದ ಬೆಂಗಳೂರು. ಬೆಂಗಳೂರಿಗೆ ನಮ್ಮಿಂದ ಅಪಕೀರ್ತಿ ಆಗಲ್ಲ. ಈ ಬೆಂಗಳೂರು ಅಭಿವೃದ್ಧಿಗೆ ಏನ್ ಸಹಕಾರ ಬೇಕಾದರೂ ಕೊಡ್ತೀವಿ ಅಂತ ಐಟಿ ಮುಖ್ಯಸ್ಥರು ಹೇಳಿದ್ದಾರೆ ಎಂದು ತಿಳಿಸಿದರು.
ಮಹದೇವಪುರದಲ್ಲಿ ಯಾವುದೇ ಕಾರಣಕ್ಕೆ ಪ್ರವಾಹ ಆಗಲ್ಲ. ಎಷ್ಟೇ ಮಳೆಯಾದರೂ ನೆರೆ ಆಗಲ್ಲ. ಮುಂದಿನ ಮಳೆಗಾಲದ ಒಳಗೆ ಮಾಡಿ ತೋರಿಸ್ತೀವಿ ಎಂಬುದಾಗಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ಮಹದೇವಪುರ ಕ್ಷೇತ್ರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮಳೆಯಿಂದ ಆಗಿರೋ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ. ಅಲ್ಲಿನ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆ. ಅಭಿವೃದ್ಧಿ ಮಾಡಿದ್ರೆ, ಯಾವುದೇ ಮಳೆ, ಪ್ರವಾಹ ಬಂದ್ರೂ ಸಮಸ್ಯೆ ಆಗದಂತೆ ಅಭಿವೃದ್ಧಿ ಮಾಡಲು ನಾವು ಬದ್ದರಾಗಿದ್ದೇವೆ. ಸಿಎಂ ನೇತೃತ್ವದಲ್ಲಿ ಮಹದೇವಪುರದಲ್ಲಿ ವಾಟರ್ ಮ್ಯಾನೇಜ್ಮೆಂಟ್ ಸಮಸ್ಯೆ ಬಗೆಹರಿಸುತ್ತೇವೆ. ಮುಂದೆ ಈ ರೀತಿಯ ಸಮಸ್ಯೆ ಅಲ್ಲಿ ಆಗಬಾರದು. ಆ ನಿಟ್ಟಿನಲ್ಲಿ ಅಲ್ಲಿ ನೆರೆ ಹಾವಳಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ನಮಗೆ ಸಂಬಂಧಗಳು ಪ್ರಮುಖ ಆಗಿದೆ. ಕಾವೇರಿ 5ನೇ ಹಂತದ ನೀರು, ಮೆಟ್ರೋ, ಎಲಿವೇಟೆಡ್ ರಸ್ತೆ ಸೇರಿದಂತೆ ಅನೇಕ ಸೌಲಭ್ಯ ಕೇಳಿದ್ದಾರೆ. ಅದನ್ನು ಒದಗಿಸುವ ಭರವಸೆ ಕೊಟ್ಟಿದ್ದೇವೆ. ಪರಸ್ಪರ ವಿಶ್ವಾಸದಿಂದ ಏನೇ ಸಮಸ್ಯೆ ಇದ್ರು ಬಗೆಹರಿಸಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ಮುಂದಿನ ಮಾನ್ಸೂನ್ ವೇಳೆ ಅಲ್ಲಿ ಆ ರೀತಿಯ ಮಳೆ ಆಗಬಾರದು. ಆ ನಿಟ್ಟಿನಲ್ಲಿ ಮಹದೇವಪುರದಲ್ಲಿ ಅಲ್ಲಿ ಸೂಕ್ತ ಕ್ರಮ ವಹಿಸುತ್ತೇವೆ. ಅವ್ರು ಕೊಟ್ಟ ಮಾತಿನಂತೆ ಅಲ್ಲಿ ಸಮಸ್ಯೆ ಸರಿಪಡಿಸುತ್ತೇವೆ ಎಂದರು.
‘ಮಕ್ಕಳ ಪೋಷಕ’ರೇ ಗಮನಕ್ಕೆ: ‘ಜವಾಹರ್ ನವೋದಯ ವಿದ್ಯಾಲಯ’ ಪ್ರವೇಶ ಪರೀಕ್ಷೆಗೆ ಆರ್ಜಿ ಆಹ್ವಾನ