ಮೈಸೂರು: ರಾಜ್ಯ ಸರ್ಕಾರವೇ ಮುರುಘಾ ಶ್ರೀಗಳ ಕೇಸ್ ನಲ್ಲಿ ಸಾಕ್ಷ್ಯ ನಾಶಕ್ಕೆ ಅವಕಾಶ ಕೊಟ್ಟಂತಿದೆ. ಈ ಪ್ರಕರಣದಲ್ಲಿ ಸಾಕ್ಷ್ಯವೆಲ್ಲ ನಾಶವಾಗಿದೆ. ಇಲ್ಲಿ ಜಗದ್ಗುರುಗಳು ಯಾರೂ ಇಲ್ಲ. ಎಲ್ಲರೂ ಜಾತಿ ಗುರುಗಳೇ ಎಂಬುದಾಗಿ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ʻಆ ಒಂದು ಪದʼ ಬಳಸಲು ನಾಚಿ ನೀರಾದ ʻರಾಹುಲ್ ದ್ರಾವಿಡ್ʼ!… ವಿಡಿಯೋ ವೈರಲ್
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡಿದಂತ ಅವರು, ಮುರುಘಾ ಶರಣರದ ಪ್ರಕರಣವನ್ನು ಹೊರಗೆ ತಂದಂತ ಒಡನಾಡಿ ಸಂಸ್ಥೆಯ ಪರಶು, ಸ್ಟ್ಯಾನ್ಲಿ ಕಾರ್ಯ ಶ್ಲಾಘನೀಯವಾಗಿದೆ. ಈಗ ಅವರಿಗೆ ಬೆದರಿಕೆ ಕರೆಗಳು ಬರ್ತಾ ಇದ್ದಾವೆ. ಧಮ್ಕಿ ಕೂಡ ಹಾಕಲಾಗುತ್ತಿದೆ. ಶ್ರೀಗಳ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದಾಗಿ ಕಿಡಿಕಾರಿದರು.
ಈಗ ಜಗದ್ಗುರುಗಳು ಯಾರೂ ಇಲ್ಲ. ಎಲ್ಲಾ ಜಾತಿ ಗುರುಗಳೇ ಆಗಿದ್ದಾರೆ. ಇಂತವರಿಗೆ ತಮ್ಮ ಜಾತಿ, ಧರ್ಮ ಕಾಪಾಡುತ್ತೆ ಎನ್ನುವಂತ ಧೈರ್ಯ ಬಂದಿದೆ. ಆದ್ರೇ ಇವರಿಗೆ ಗೊತ್ತಿಲ್ಲ. ಇದಕ್ಕಿಂತ ಕಾನೂನು ದೊಡ್ಡದು ಎಂಬುದಾಗಿದೆ ಎಂದರು.