ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ( ಸಿವಿಲ್ ) ಹುದ್ದೆ ನೇಮಕಾತಿಗೆ ( Police Constable Recruitment ) ಡಿಪ್ಲೊಮಾ, ಜೆಓಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ( Karnataka Police Department ) ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಲಾಗಿದೆ.
BIGG NEWS : ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡನೆ : ದೆಹಲಿಯಲ್ಲಿ ʻರಾಮ್ಲೀಲಾ ಮೈದಾನʼದಲ್ಲಿ ʻ ಕೈ ʼ ಪ್ರತಿಭಟನೆ
ಈ ಸಂಬಂಧ ನೇಮಕಾತಿ ವಿಭಾಗದ ಡಿಐಜಿ ಕಮಲ್ ಪಂತ್ ( Kamal Pant IPS ) ಅವರು ಸುತ್ತೋಲೆ ಹೊರಡಿಸಿದ್ದು, ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್ ) ಹುದ್ದೆ ನೇಮಕಾತಿಗೆ ಡಿಪ್ಲೊಮಾ, ಜೆಓಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನ ಕುರಿತು ನೀಡಲಾಗಿರುವ ಸರ್ಕಾರದ ಸುತ್ತೋಲೆ ಪರಿಶೀಲಿಸಲಾಗಿದೆ ಎಂದಿದ್ದಾರೆ.
BREAKING NEWS : ಮುರುಘಾ ಶ್ರೀಗಳ ಬೆಳ್ಳಂಬೆಳಗ್ಗೆ ಆರೋಗ್ಯ ತಪಾಸಣೆ : ಇಂದೂ ಮುಂದುವರೆಯಲಿದೆ ಶ್ರೀಗಳ ವಿಚಾರಣೆ
ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆಗಳಿಗೆ 2018 ರಿಂದ 2021ರವರೆಗೆ ಹಲವು ಅಧಿಸೂಚನೆಗಳನ್ನು ಹೊರಡಿಸಿದ್ದು, ಆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಸರ್ಕಾರದ ಸುತ್ತೋಲೆಯನ್ವಯ ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಗೆ ನೀಡಲಾದ ಸ್ಪಷ್ಟತೆ ಆಧಾರದ ಮೇಲೆ ಅಂದರೇ ಡಿಪ್ಲೊಮಾ, ಜೆಓಸಿ ಮತ್ತು ಐಟಿಐ ವ್ಯಾಸಂಗ ಮಾಡಿದಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ಭಾಷಿ ಮತ್ತು ಒಂದು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕಾಗಿರುತ್ತದೆ. ಅದರಂತೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಸುತ್ತೋಲೆ 27-02-2018ರ ಆಧಾರದ ಮೇಲೆ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದ್ದು, ಪಿಯುಸಿ ತತ್ಸಮಾನತೆಗೆ ಯಾವುದೇ ವಿನಾಯಿತಿ ಇಲ್ಲದಿರುವುದರಿಂದ, ಅದರಂತೆ ಕ್ರಮವಹಿಸಿ, ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚಿಸಿದ್ದಾರೆ.