ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್(Ghulam Nabi Azad) ಅವರು ತಮ್ಮ ಐದು ದಶಕಗಳ ಕಾಲದ ಹಳೆಯ ಪಕ್ಷದೊಂದಿಗೆ ತಮ್ಮ ಒಡನಾಟವನ್ನು ಮುರಿದ ನಂತರ ಅವರ ಹೊಸ ರಾಜಕೀಯ ಅಧ್ಯಾಯ ಏನಾಗಲಿದೆ ಎಂಬುದಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ಜಮ್ಮುವಿನಲ್ಲಿ ನಡೆಯುವ ರ್ಯಾಲಿಯಲ್ಲಿ ಆಜಾದ್ ತಮ್ಮ ಹೊಸ ಪಕ್ಷದ ರಚನೆಯನ್ನು ಘೋಷಿಸುವ ಸಾಧ್ಯತೆಯಿದೆ.
73ರ ಹರೆಯದ ಆಜಾದ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಜಮ್ಮುವಿಗೆ ಆಗಮಿಸಲಿದ್ದಾರೆ. ರ್ಯಾಲಿಯಲ್ಲಿ ಸುಮಾರು 20,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ವೇಳೆ ತಮ್ಮ ರಾಷ್ಟ್ರೀಯ ಮಟ್ಟದ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ.
Ghulam Nabi Azad leaves from his residence in Delhi for Jammu, where he is to hold a public meeting at the Sainik colony today pic.twitter.com/TKYvQkYqKt
— ANI (@ANI) September 4, 2022
BIGG NEWS : ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡನೆ : ದೆಹಲಿಯಲ್ಲಿ ʻರಾಮ್ಲೀಲಾ ಮೈದಾನʼದಲ್ಲಿ ʻ ಕೈ ʼ ಪ್ರತಿಭಟನೆ