ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ( Vani Vilasa Sagara Dam ) ಭರ್ತಿಯಾಗಿದೆ. ಇದೀಗ ಜಲಾಶಯದ ಕೋಡಿ ಬಿದ್ದಿದ್ದು, ತಾಲೂಕಿನ ರೈತರಲ್ಲಿ ಸಂತಸ ಮನೆ ಮಾಡಿದೆ. ಬಯಲು ಸೀಮೆಯ ಜೀವನಾಡಿ ವಿವಿಸಾಗರ ಭರ್ತಿಗೆ ಸಚಿವ ಗೋವಿಂದ ಕಾರಜೋಳ ( Minister Govida Karjola ) ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಭಾರತದ ‘ಭೂಪಟ’ದಂತೆ ಪ್ರತಿಬಿಂಬಿತವಾಗುವ ಬಯಲು ಸೀಮೆಯ ವರದಾನ ವಾಣಿವಿಲಾಸ ಸಾಗರ ಜಲಾಶಯ, 89 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭರ್ತಿಯಾಗಿ ನಮ್ಮ ನಾಡನ್ನು ಪ್ರಸನ್ನಗೊಳಿಸಿರುವುದು ನನಗೆ ಅತೀವ ಹರ್ಷ ತಂದಿದೆ. ಈ ಜಲಾಶಯಕ್ಕೆ 89 ವರ್ಷಗಳ ನಂತರ ಬಾಗಿಣ ಅರ್ಪಿಸುವ ಸೌಭಾಗ್ಯ ಸಿಗಲಿದೆ. ಇಷ್ಟರಲ್ಲಿಯೇ ಈ ಮಂಗಳ ಕಾರ್ಯವನ್ನು ಸರ್ಕಾರದ ಪರವಾಗಿ ನೆರವೇರಿಸುತ್ತೇ ಎಂದಿದ್ದಾರೆ.
BIGG NEWS : ‘CET’ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ; ‘ದಾಖಲಾತಿ ಪರಿಶೀಲನೆ’ಗೆ ಮತ್ತಷ್ಟು ಅವಕಾಶ.!
ಅಂದಹಾಗೇ ಮಾರಿಕಣಿವೆ ಡ್ಯಾಂ ಎಂಬುದಾಗಿಯೇ ಪ್ರಸಿದ್ಧಿ ಗಳಿಸಿರುವಂತ ಜಲಾಶಯದ ಗರಿಷ್ಠ ಮಟ್ಟ 130 ಅಡಿಯಾಗಿದೆ. 1933ರಲ್ಲಿ 130.25 ಅಡಿ ನೀರು ಸಂಗ್ರಹವಾಗಿ, ಕೋಡಿ ಬಿದ್ದಿತ್ತು. ಆ ಬಳಿಕ, 2022ರಲ್ಲಿ ವಾಣಿ ವಿಲಾಸ ಸಾಗರ ಭರ್ತಿಯಾಗಿ, 2ನೇ ಬಾರಿಗೆ ಕೋಡಿ ಬಿದ್ದು ಹೊಸ ದಾಖಲೆ ನಿರ್ಮಿಸಿದೆ.