ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಅಣೆಕಟ್ಟು ( Vani Vilasa Sagara Dam ), ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭರ್ತಿಯಾಗಿದೆ. ಈಗ 89 ವರ್ಷಗಳ ಬಳಿಕ, ವಿವಿ ಸಾಗರ ಡ್ಯಾಂ ( VV Sagara Dam ) ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.
ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: KSRTC ಬಸ್ ಪಾಸ್ ಅವಧಿ ವಿಸ್ತರಣೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪುರಾತನ ಅಣೆಕಟ್ಟೆಗಳಲ್ಲಿ ಒಂದಾದಂತ ವಾಣಿವಿಲಾಸ ಜಲಾಶಯ 89 ವರ್ಷಗಳ ಬಳಿಕ ಭರ್ತಿಯಾಗಿದ್ದು, ದಾಖಲೆಯ ಮಟ್ಟದಲ್ಲಿ ವಿವಿ ಸಾಗರ ಡ್ಯಾಂ ನಲ್ಲಿ ನೀರು ಸಂಗ್ರಹಣೆಯಾಗಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.85 ಅಡಿ ಇದ್ದು, ಇಂದಿನ ವರದಿಯಂತೆ 3,546 ಕ್ಯೂಸೆಕ್ ಒಳಹರಿವಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗೋದಕ್ಕೆ ಅರ್ಧ ಅಡಿ ಮಾತ್ರವೇ ಬಾಕಿ ಇದೆ. ಕೋಡಿಗೆ ನೀರು ಬಂದಿದ್ದು, ಇಂದು ರಾತ್ರಿಯೊಳಗೆ ಕೋಡಿ ಬಿದ್ದು ಜಲಾಶಯದ ನೀರು ಹೊರ ಹೋಗುವ ಸಾಧ್ಯತೆ ಇದೆ.
ಅಂದಹಾಗೇ 1933ರಲ್ಲಿ 130.25 ಅಡಿ ನೀರು ಸಂಗ್ರಹ ವಾಣಿ ವಿಲಾಸ ಸಾಗರ ಡ್ಯಾಂನಲ್ಲಿ ಸಂಗ್ರಹವಾಗಿತ್ತು. ಆಗ ಮಾತ್ರ ಕೋಡಿ ಬಿದ್ದಿತ್ತು. ಆ ನಂತ್ರ 89 ವರ್ಷಗಳ ಬಳಿಕ ಇದೀಗ ಕೋಡಿ ಬೀಳುತ್ತಿದೆ. ಹೀಗಾಗಿ ಮಾರಿಕಣಿವೆ ಜಲಾಶಯ ನೀರಿನ ಬಳಕೆದಾರ ರೈತರಲ್ಲಿ ಸಂತಸ ಮನೆ ಮಾಡಿದೆ.
ಇನ್ನೂ ವಿವಿ ಸಾಗರ ಡ್ಯಾಂ ಕೋಡಿ ಬೀಳುತ್ತಿರೋ ಕಾರಣ, ವೇದಾವತಿ ನದಿ ತೀರದ ಜನರಿಗೆ ನದಿಗೆ ಇಳಿಯದಂತೆ, ಮಕ್ಕಳು, ಧನಕರುಗಳನ್ನು ಬಿಡದಂತೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
BIG NEWS: ಮುರಘಾ ಶ್ರೀ ಮತ್ತೆ ನಾಪತ್ತೆ, ಪೋಲಿಸರಿಂದ ‘Lookout Notice’ ಜಾರಿ, ಹೆಚ್ಚಿದ ಬಂಧನ ಭೀತಿ