ಹಾವೇರಿ: ಗಣೇಶ ವಿಸರ್ಜನೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಸೆ.1 ರಿಂದ ಸೆ.28ರವರೆಗೆ ಮದ್ಯಮಾರಾಟ ನಿಷೇಧಿಸಿ ( Liquor Sale Ban ) ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಕಾಗಿನೆಲೆ, ರಾಣೇಬೆನ್ನೂರು ಗ್ರಾಮೀಣ, ಆಡೂರು, ತಿಳವಳ್ಳಿ, ಕುಸನೂರ, ಹೇರೂರು, ಕಲಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಸೆ.2 ರ ಬೆಳಿಗ್ಗೆ 6 ರಿಂದ ಸೆ.3ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.
ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಏಕತೆ ಹಾಗೂ ಸಮೃದ್ಧಿಯ ಸಂಕೇತ – ಸಿಎಂ ಬೊಮ್ಮಾಯಿ
ಹಾವೇರಿ ಶಹರ, ಬ್ಯಾಡಗಿ, ಮೊಟೇಬೆನ್ನೂರ, ಕಾಗಿನೆಲೆ, ಹಿರೇಹಳ್ಳಿ, ದೇವಿಹೊಸೂರು, ಕರ್ಜಗಿ, ದೇವಗಿರಿ, ನೆಲೋಗಲ್, ರಾಣೇಬೆನ್ನೂರು ಗ್ರಾಮೀಣ, ಕೋಡಿಯಾಲ ಹೊಸಪೇಟೆ, ಹಿರೇಕೆರೂರು, ಸವಣೂರು, ಶಿಗ್ಗಾಂವ, ತಡಸ, ಬಂಕಾಪೂರ, ಹಾನಗಲ್, ಬಮ್ಮನಹಳ್ಳಿ, ಸಮ್ಮಸಗಿ, ಆಡೂರು, ತಿಳವಳ್ಳಿ, ಕುಸನೂರ, ಹೇರೂರು, ಕಲಕೇರಿ ಹಾಗೂ ಬೆಳಗಾಲಪೇಟೆ ಗ್ರಾಮ ವ್ಯಾಪ್ತಿಯಲ್ಲಿ ಸೆ.4 ರ ಬೆಳಿಗ್ಗೆ 6 ರಿಂದ ಸೆ.5ರ ಬೆಳಿಗ್ಗೆ 6ರವರೆಗೆ ಹಾಗೂ ಹಾವೇರಿ ಶಹರ, ರಾಣೇಬೆನ್ನೂರ ಗ್ರಾಮೀಣ, ಹಾನಗಲ್, ಸೆ.6 ರ ಬೆಳಿಗ್ಗೆ 6 ರಿಂದ ಸೆ.7ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.
ಹಲಗೇರಿ ಹಾಗೂ ರಟ್ಟಿಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಸೆ.7ರ ಬೆಳಿಗ್ಗೆ 6 ರಿಂದ ಸೆ.8ರ ಬೆಳಿಗ್ಗೆ 6ರವರೆಗೆ, ಹಾವೇರಿ ಶಹರ, ಬ್ಯಾಡಗಿ, ಮೊಟೇಬೆನ್ನೂರ, ರಾಣೇಬೆನ್ನೂರು ಗ್ರಾಮೀಣ, ಮಾಸೂರು, ಚಿಕ್ಕೇರೂರು, ಕೋಡ, ಸವಣೂರು, ತಡಸ, ಹಾನಗಲ್, ಬಮ್ಮನಹಳ್ಳಿ, ತಿಳವಳ್ಳಿ, ಕುಸನೂರ, ಹೇರೂರು, ಕಲಕೇರಿ ವ್ಯಾಪ್ತಿಯಲ್ಲಿ ಸೆ.8 ರ ಬೆಳಿಗ್ಗೆ 6 ರಿಂದ ಸೆ.9ರ ಬೆಳಿಗ್ಗೆ 6ರವರೆಗೆ ಹಾಗೂ ಹಲಗೇರಿ ವ್ಯಾಪ್ತಿಯಲ್ಲಿ ಸೆ.9 ರ ಬೆಳಿಗ್ಗೆ 6 ರಿಂದ ಸೆ.10ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.
ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: KSRTC ಬಸ್ ಪಾಸ್ ಅವಧಿ ವಿಸ್ತರಣೆ
ದೇವಗಿರಿ, ರಟ್ಟಿಹಳ್ಳಿ, ಸವಣೂರು, ಹಾನಗಲ್, ಅಕ್ಕಿಆಲೂರು, ಕಲ್ಲಾಪೂರ, ಆಡೂರು, ತಿಳವಳ್ಳಿ, ಕುಸನೂರ, ಹೇರೂರು, ಕಲಕೇರಿ ವ್ಯಾಪ್ತಿಯಲ್ಲಿ ಸೆ.10 ರ ಬೆಳಿಗ್ಗೆ 6 ರಿಂದ ಸೆ.11ರ ಬೆಳಿಗ್ಗೆ 6ರವರೆಗೆ ಹಾಗೂ ಹಾವೇರಿ ಶಹರ, ಕರೂರು, ಹಾನಗಲ್ ವ್ಯಾಪ್ತಿಯಲ್ಲಿ ಸೆ.12 ರ ಬೆಳಿಗ್ಗೆ 6 ರಿಂದ ಸೆ.13ರ ಬೆಳಿಗ್ಗೆ 6ರವರೆಗೆ, ರಾಣೇಬೆನ್ನೂರ ಶಹರ ಹಾಗೂ ಬೆಳಗಾಲಪೇಟೆ ವ್ಯಾಪ್ತಿಯಲ್ಲಿ ಸೆ.14 ರ ಬೆಳಿಗ್ಗೆ 6 ರಿಂದ ಸೆ.15ರ ಬೆಳಿಗ್ಗೆ 6ರವರೆಗೆ, ರಾಣೇಬೆನ್ನೂರ ಶಹರದಲ್ಲಿ ಸೆ.18 ರ ಬೆಳಿಗ್ಗೆ 6 ರಿಂದ ಸೆ.19ರ ಬೆಳಿಗ್ಗೆ 6ರವರೆಗೆ, ಅಕ್ಕಿಆಲೂರು ಹಾಗೂ ಕಲ್ಲಾಪೂರದಲ್ಲಿ ಸೆ.19 ರ ಬೆಳಿಗ್ಗೆ 6 ರಿಂದ ಸೆ.20ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ.
ಹಾನಗಲ್ನಲ್ಲಿ ಸೆ.20 ರ ಬೆಳಿಗ್ಗೆ 6 ರಿಂದ ಸೆ.21ರ ಬೆಳಿಗ್ಗೆ 6ರವರೆಗೆ, ಹಾವೇರಿ ಶಹರ ಸೆ.26 ರ ಬೆಳಿಗ್ಗೆ 6 ರಿಂದ ಸೆ.27ರ ಬೆಳಿಗ್ಗೆ 6ರವರೆಗೆ ಹಾಗೂ ರಾಣೇಬೆನ್ನೂರ ಶಹರದಲ್ಲಿ ಸೆ.28 ರ ಬೆಳಿಗ್ಗೆ 6 ರಿಂದ ಸೆ.29ರ ಬೆಳಿಗ್ಗೆ 6ರವರೆಗೆ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನಿಷೇಧಿತ ಅವಧಿಯಲ್ಲಿ ಮದ್ಯಾಮಾರಾಟ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ.
BIG NEWS: ಮುರಘಾ ಶ್ರೀ ಮತ್ತೆ ನಾಪತ್ತೆ, ಪೋಲಿಸರಿಂದ ‘Lookout Notice’ ಜಾರಿ, ಹೆಚ್ಚಿದ ಬಂಧನ ಭೀತಿ
ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ ವ್ಯವಸ್ಥೆ
ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 4 ರಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಂಚಾರಿ ವಿಸರ್ಜನಾ ವಾಹನವನ್ನು ಹಾವೇರಿ ನಗರದ ಆಯ್ದ ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪರಿಸರ ಅಧಿಕಾರಿ ಸುಧಾ ಸೌಮ್ಯಲತಾ ಎಂ.ಕೆ.ಅವರು ತಿಳಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ವಿವಿಧ ಜಲಮೂಲಗಳಲ್ಲಿ ವಿಸರ್ಜಸಿ ಅಲ್ಲಿನ ಪರಿಸರ ಹಾಗೂ ಜಲಮೂಲಗಳನ್ನು ಅಶುದ್ಧಗೊಳಿಸುವ ಪ್ರಕ್ರಿಯೆ ತಡೆಗಟ್ಟಲು ಹಾಗೂ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಂಚಾರಿ ಗಣೇಶನ ಮೂರ್ತಿ ವಿಸರ್ಜನಾ ವಾಹನದ ವ್ಯವಸ್ಥೆ ಮಾಡಲಾಗಿದೆ.
ಸೆ.4 ರಂದು ಸಾಯಂಕಾಲ 6 ರಿಂದ 8-30ರವರೆಗೆ ಪಿ.ಡಬ್ಲ್ಯೂ.ಡಿ. ಕ್ವಾರ್ಟ್ರ್ಸ್(ಎಂ.ಜಿ.ಬ್ಯಂಕ್ ಹತ್ತಿರ) ಹಾಗೂ ರಾತ್ರಿ 8-45 ರಿಂದ 10 ಗಂಟೆವರೆಗೆ ಪುರದ ಓಣಿ ಮತ್ತು ಏಲಕ್ಕಿ ಓಣಿ(ಜೈನ ದೇವಸ್ಥಾನದ ಹತ್ತಿರ) ವಾಹನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗಣೇಶನ ಮೂರ್ತಿಗಳನ್ನು ಮಂಡಳಿಯ ಸಂಚಾರಿ ವಾಹನದಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ.