ಹಾವೇರಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಸುವಿಧಾ ತಂತ್ರಾಂಶದಡಿ ವಿಕಲಚೇತನರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ
ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಪುನರ್ವಸತಿ ಕಾರ್ಯಕರ್ತರ ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ಹಾಗೂ ವೈದ್ಯಕೀಯ ಪರಿಹಾರ ನಿಧಿ ಯೋಜನೆಗಳಿಗೆ ವೆಬ್ಸೈಟ್ http//:suvidha.Karnataka.gov.in ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ 29-9-2022 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಯ ಹಾರ್ಡ್ ಪ್ರತಿಯೊಂದಿಗೆ ಆಯಾ ತಾಲೂಕಿನ ತಾಲೂಕ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಡಗಿ ಎಂ.ಆರ್.ಡಬ್ಲ್ಯೂ ನಾಗರಾಜ ಅಗಸನಹಳ್ಳಿ 9900554583, ಶಿಗ್ಗಾಂವ- ಸಿದ್ದಪ್ಪ ಮಸಳಿ ಮೊ.9008032497, ಹಾವೇರಿ- ಲಕ್ಷ್ಮವ್ವ ಈಳಗೇರ 9632052188, ಹಾನಗಲ್ -ಶೇಖಪ್ಪ ಹುಲ್ಲತ್ತಿ ಮೊ.7760374425, ಸವನೂರ ಶಿವಪ್ಪ ಯರೇಶಿಮಿ ಮೊ.9632441802, ರಾಣೆಬೆನ್ನೂರು- ಸುರೇಶ 9481343768 ಇವರುಗಳಲ್ಲಿ ಸಲ್ಲಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀಮತಿ ಆಶು ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ 08375-249014 ಸಂಪರ್ಕಿಸಬಹುದು.