ಕೋಲಾರ: ವಾಹನ ತರಬೇತಿ ( Driving Training ) ನಿರೀಕ್ಷೆಯಲ್ಲಿದ್ದವರಿಗೆ, ಕೆ ಎಸ್ ಆರ್ ಟಿ ಸಿಯಿಂದ ( KSRTC ) ಸುವರ್ಣಾವಕಾಶ ಒದಗಿಸಿದೆ. ಉಚಿತವಾಗಿ ಲಘು, ಭಾರೀ ವಾಹನ ಚಾಲನಾ ತರಬೇತಿಗಾಗಿ ( Light and heavy vehicle driving training ) ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ಮಾಲೂರು ಘಟಕದಿಂದ ಮಾಹಿತಿ ನೀಡಲಾಗಿದ್ದು, ಮುಖ್ಯ ಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರುದ್ಯೋಗಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಊಟ ಮತ್ತು ವಸತಿ ಉಚಿತವಾಗಿ ಲಘು(ಕಾರು) ಹಾಗೂ ಭಾರಿ (ಬಸ್) 30 ದಿನ ತರಬೇತಿ ನೀಡಿ ಲೈಸೆನ್ಸ್ ನೀಡಲು ಅರ್ಜಿ ಆಹ್ವಾನಿಸಿರೋದಾಗಿ ತಿಳಿಸಿದೆ.
BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ
ಅಂದಹಾಗೇ ಈ ಲಘು, ಭಾರೀ ವಾಹನ ತರಬೇತಿಯು ಕೇವಲ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾತ್ರವೇ ಆಗಿದೆ. ಊಟ, ವಸತಿಯೊಂದಿಗೆ ಉಚಿತವಾಗಿ 30 ದಿನಗಳ ಕಾಲ ಲಘು ವಾಹನ, ಭಾರೀ ವಾಹನ ತರಬೇತಿಯನ್ನು ಕೆ ಎಸ್ ಆರ್ ಟಿ ಸಿಯಿಂದ ನೀಡಲಾಗುತ್ತದೆ.
ತರಬೇತಿಗೆ ಸಲ್ಲಿಸಬೇಕಾದ ದಾಖಲೆಗಳು
- ಎಸ್ ಎಸ್ ಎಲ್ ಸಿ. ಪಾಸು ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಪೋಟೋ
ಈ ಮೇಲ್ಕಂಡ ದಾಖಲೆಗಳೊಂದಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನೇರವಾಗಿ ಕೋಲಾರದ ಮಾಲೂರು ಬಳಿಯಲ್ಲಿನ ಕೆ ಎಸ್ ಆರ್ ಟಿ ಸಿ ತರಬೇತಿ ಘಟಕಕ್ಕೆ ಹಾಜರಾಗಿ, 30 ದಿನಗಳಲ್ಲಿ ಲಘು, ಭಾರೀ ವಾಹನ ಚಾಲನಾ ತರಬೇತಿಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು 7760992539 ಅಥವಾ 7760990133 ಸಂಖ್ಯೆಗಳಿಗೆ ಕರೆ ಮಾಡಿ ಮಾಡಿ ಪಡೆಯಬಹುದಾಗಿದೆ.