ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಾಲಾಶಯ ( Vanivilasa Sagara Dam ) ಕೋಡಿ ಬೀಳೋದಕ್ಕೆ ಕೇವಲ ಅರ್ಧ ಅಡಿ ಮಾತ್ರವೇ ಬಾಕಿ ಉಳಿದಿದೆ. ಹೀಗಾಗಿ ಕೋಡಿ ಬಿದ್ದ ನೀರು ವೇದಾವತಿ ನದಿಗೆ ( Vedavati River ) ಹರಿಯೋ ಕಾರಣ, ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಜನರಿಗೆ ಸೂಚಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಹಿರಿಯೂರು ನಗರಸಭೆಯಿಂದ ಮಾಹಿತಿ ನೀಡಲಾಗಿದ್ದು, ವಾಣಿ ವಿಲಾಸ ಸಾಗರ ಕೋಡಿ ಬೀಳುವ ಸಂಭವ ಇದೆ. ಕೋಡಿ ಬಿದ್ದ ನೀರು ವೇದಾವತಿ ನದಿಯಲ್ಲಿ ಹರಿಯಲಿದೆ. ಹೀಗಾಗಿ ವೇದಾವತಿ ನದಿ ಪಾತ್ರದಲ್ಲಿನ ಚನರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ
ಇನ್ನೂ ವೇದಾವತಿ ನದಿ ತೀರದ ಸಾರ್ವಜನಿಕರು ಮಕ್ಕಳನ್ನು, ದನಕರುಗಳನ್ನು ಬಿಡಬಾರದೆಂದು ತಿಳಿಸಿದೆ. ಜೊತೆಗೆ ಹಿರಿಯೂರು ನಗರದ ನದಿ ಪಾತ್ರದಲ್ಲಿ ವಾಸವಾಗಿರುವ ವಾರ್ಡ್ ನಂ.8, 9, 6, 7, 11 ಮತ್ತು 12ರ ಜನರು ಮಕ್ಕಳ ಜೊತೆಗೆ, ಧನಕರುಗಳನ್ನು ನದಿ ಪಾತ್ರದಲ್ಲಿ ಬಿಡಬಾರದು ಎಂದು ಹೇಳಿದೆ.