ನವದೆಹಲಿ: ಕಾಂಗ್ರೆಸ್ ಪಕ್ಷದ ( Congress ) ಅಧಿಕೃತ ಯೂಟ್ಯೂಬ್ ಚಾನೆಲ್ ( YouTube channel ) ಅನ್ನು ಇಂದು ಡಿಲಿಟ್ ಮಾಡಲಾಗಿದೆ. ಇದಕ್ಕೆ ತಾಂತ್ರಿಕ ದೋಷ ಅಥವಾ ವಿಧ್ವಂಸಕತೆ ಕಾರಣ ಎನ್ನಲಾಗಿದೆ. ಹೀಗಾಗಿ ಪಕ್ಷದಿಂದ ತನಿಖೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.
ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ ನವೀಕರಣ: ಆ.26ರಂದು ಸಿಎಂ ಬೊಮ್ಮಾಯಿ ಲೋಕಾರ್ಪಣೆ
‘ನಮ್ಮ ಯೂಟ್ಯೂಬ್ ಚಾನೆಲ್ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಅನ್ನು ಡಿಲೀಟ್ ಮಾಡಲಾಗಿದೆ. ನಾವು ಅದನ್ನು ಸರಿಪಡಿಸುತ್ತಿದ್ದೇವೆ ಮತ್ತು ಗೂಗಲ್ / ಯೂಟ್ಯೂಬ್ ತಂಡಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಪಕ್ಷವು ತನ್ನ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದೆ.
ಎಷ್ಟೇ ಹಣ ಸಂಪಾದಿಸಿದ್ರು ಉಳಿಯುತ್ತಿಲ್ಲವೇ.? ಹಾಗಿದ್ರೇ ಈ ಸಮಸ್ಯೆ ಇರಬಹುದು.!
ಇದಕ್ಕೆ ಕಾರಣವೇನೆಂದು ನಾವು ತನಿಖೆ ಮಾಡುತ್ತಿದ್ದೇವೆ – ತಾಂತ್ರಿಕ ದೋಷ ಅಥವಾ ವಿಧ್ವಂಸಕ ಕೃತ್ಯ. ಶೀಘ್ರದಲ್ಲೇ ಹಿಂತಿರುಗುವ ಭರವಸೆ ಇದೆ ಎಂದು ಅದು ಹೇಳಿದೆ.
Hi,
Our YouTube channel – 'Indian National Congress' has been deleted. We are fixing it and have been in touch with Google/YouTube teams.
We are investigating what caused this – a technical glitch or sabotage.
Hope to be back soon.
Team
INC Social Media— Congress (@INCIndia) August 24, 2022