ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2022ನೇ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಕರ್ನಾಟಕದ ಇಬ್ಬರು ಸಾಹಿತಿಗಳಿಗೆ ಪ್ರಶಸ್ತಿಯ ಗರಿಮೆ ಲಭಿಸಿದೆ.
ಈ ಕುರಿತಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಕಾಡೆಮಿಯಿಂದ ನೀಡುವಂತ ಯುವ ಸಾಹಿತ್ಯ ಪ್ರಶಸ್ತಿಯನ್ನು ದಾದಾಪೀರ್ ಜೈಮನ್ ಅವರು ಪಾತ್ರರಾಗಿದ್ದಾರೆ.
ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ನೀಡುವಂತ 2022ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮಣ ಬೀಗಾರ ಅವರು ಭಾಜನರಾಗಿದ್ದಾರೆ.
ಅಂದಹಾಗೇ ಯುವ ಸಾಹಿತ್ಯ ಪ್ರಶಸ್ತಿಯನ್ನು ದಾದಾಪೀರ್ ಜೈಮನ್ ಅವರ ನೀಲಕುರಿಂಜಿ ಕಥಾ ಸಂಕಲನಕ್ಕೆ ನೀಡಲಾಗಿದ್ದರೇ, ಬಾಲ ಸಾಹಿತ್ಯ ಪ್ರಶಸ್ತಿಯನ್ನು ತಮ್ಮಣ ಬೀಗಾರ ಅವರ ಬಾವಲಿ ಗುಹೆ ಎಂಬ ಮಕ್ಕಳ ಕಾದಂಬರಿಗೆ ನೀಡಲಾಗಿದೆ.