ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2022ನೇ ಸಾಲಿನ ಪ್ರೆಸ್ ಕ್ಲಬ್ ಬಿಸಿನೆಸ್ ಐಕಾನ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ನಾಳೆ ಸಂಜೆ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಪ್ರಸ್ ಕ್ಲಬ್ ಮಾಹಿತಿ ನೀಡಿದ್ದು, ದಿನಾಂಕ:24.8.2022 (ನಾಳೆ) ಸಂಜೆ 5.30 ಕ್ಕೆ ಪ್ರೆಸ್ಕ್ಲಬ್ ಆವರಣದಲ್ಲಿ ಏರ್ಪಡಿಸಿರುವ ಪ್ರೆಸ್ಕ್ಲಬ್ ಬಿಸಿನೆಸ್ ಐಕಾನ್ ಆವಾರ್ಡ್-2022 ರ ಕಾರ್ಯ ಕ್ರಮದಲ್ಲಿ ಕೈಗಾರಿಕಾ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರ ಪೈಕಿ 19 ಮಂದಿಯನ್ನು ಗುರ್ತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದೆ.
ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುರೇಶ್ ನಿರಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದೆ.
ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಮತ್ತು ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ, ಶಿವಾಜಿನಗರ ವಿಧಾನಸಭಾ ಕ್ಷೇತ್ರ ಶಾಸಕರಾದ ರಿಜ್ವಾನ್ ಅರ್ಷದ್, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ. ಸತೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್, ಖ್ಯಾತ ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್, ಖ್ಯಾತ ಚಲನಚಿತ್ರ ನಟಿ ಕುಮಾರಿ ರಮ್ಯಾ ಹಾಗೂ ಹಿರಿಯ ಪತ್ರಕರ್ತರಾದ ರವಿ ಹೆಗಡೆ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
BIG NEWS: ರಾಜ್ಯ ‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಸೆ.1ರಿಂದ ‘ಸೇವಾವಹಿ ESR’ನಲ್ಲಿ ನಿರ್ವಹಣೆ ಕಡ್ಡಾಯ
ಹೀಗಿದೆ.. ಪ್ರೆಸ್ಕ್ಲಬ್ ಬಿಸಿನೆಸ್ ಐಕಾನ್ ಆವಾರ್ಡ್-2022 ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಅದಿತಿ, ಹೆಲ್ಪಿಂಗ್ ಹಾಟ್ರ್ಸ್, ಎನ್.ಜಿಒ
- ಸುನಿಲ್ ಪೂಜಾರಿ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ಏರ್ವೇಸ್ ಕೋರಿಯರ್ ಪ್ರೈ.ಲಿ
- ಕೆ.ಎಂ.ಎಫ್
- ಜಯಂತಿ, ವ್ಯವಸ್ಥಾಪಕ ನಿರ್ದೇಶಕರು, ನೋನಿ ಸಿಪ್
- ಡಾ. ರವಿ ರಾಜ್, ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು., ವೇದಂ ಆಯುರ್ವೇದ
- ಸಂತೋಷ್ ಗುರೂಜಿ (ಡಾ. ವಿಶ್ವ ಸಂತೋಶ್ ಶ್ರೀಪಾದಂಗಳವರ್ ಸ್ವಾಮೀಜಿ), ಆಯುರ್ಕೇಶ್ ಹೇರ್ ಆಯಿಲ್
- ಡಿ.ಕೆ. ಮೋಹನ್ಬಾಬು, ಅಧ್ಯಕ್ಷರು, ಕೇಂಬ್ರಿಜ್ ಎಂಜಿನಿಯರಿಂಗ್ ಕಾಲೇಜ್
- ಚೇತನ್, ವ್ಯವಸ್ಥಾಪಕ ನಿರ್ದೇಶಕರು, ಇಕ್ವಿನಾಕ್ಸ್ ಗ್ಲೋಬಲ್ ಶೆಲ್ಟರ್ಸ್
- ಡಾ. ರಘು, ವ್ಯವಸ್ಥಾಪಕ ನಿರ್ದೇಶಕರು, ನಮ್ಮ ವೈದ್ಯಶಾಲಾ ಹೋಮಿಯೋಪತಿ
- ವಿಜಯ ಸಾರಥಿ ಡಿ. ಆರ್, ಶ್ರೀ ವಾಸವಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್-ಪಿ.ಯು ಡಿಪ್ಲೊಮಾ ಕಾಲೇಜು
- ಪೂಜಿತ & ಲಕ್ಷ್ಮಿ ನಾರಾಯಣ್, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಆರಾ ಡಿಸೈನ್ ಲೋಟಸ್- ಆರ್ಕಿಟೆಕ್ಚರ್
- ರೋಹಿತ್ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರು, ವಿದ್ವತ್ ಇನೋವಿಟಿವ್ ಸೆಲ್ಯೂಷನ್
- ಡಾ. ನಂದಿನಿ, ವ್ಯವಸ್ಥಾಪಕ ನಿರ್ದೇಶಕರು, ಐಎಸ್ಆರ್ಐ ಗ್ರೂಪ್- ಅಗ್ರಿಕಲ್ಚರ್
- ರಾಜಶೇಖರ್, ವ್ಯವಸ್ಥಾಪಕ ನಿರ್ದೇಶಕರು, ಐಹೆಚ್ಎಫ್ಎಲ್ – ಇ.ವಿ
- ನಿಂಗರಾಜು, ವ್ಯವಸ್ಥಾಪಕ ನಿರ್ದೇಶಕರು, ಹಳ್ಳಿ ಜೊನ್ನೆ ಬಿರಿಯಾನಿ- ಫುಡ್ ಎಂಟರ್ಪ್ರಿನಿಯರ್
- ಸತೀಶ್, ಮ್ಯಾನೇಜಿಂಗ್ ಡೈರೆಕ್ಟರ್, ಅಭಯ ಗೋಲ್ಡ್, ಗೋಲ್ಡ್ ಬೈಯರ್
- ರಿಯಲ್ ಎಸ್ಟೇಟ್ ಎಂ & ಎಂ
- ದಿಲಿಪ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಜೀನಿ ಮಿಲೆಟ್ಸ್
- ಡಾ. ಡಿಂಪಲ್ ಆರ್. ಗೌಡ, ಸಂಸ್ಥಾಪಕರು, ಪ್ರಿನ್ಸಿಪಾಲ್, ಏಷ್ಯನ್ ಇಂಟರ್ ನ್ಯಾಷನಲ್ ಸ್ಕೂಲ್