ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ಲೋಕೋಪಯೋಗಿ ಇಲಾಖೆ ಎಂಬುದಾಗಿ ಮರುನಾಮಕರಣಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ದಿನಾಂಕ 07-06-2013ರ ಕನ್ನಡ ಅವತರಣಿಕೆಯ ಅನುಬಂಧ-1ರ ಕಂಡಿಕೆ 2ರಲ್ಲಿನ ಪಟ್ಟಿಯ ಕಾಲಂ.3ರಲ್ಲಿ ಸೇವಾ ನಿರತ ಇಲಾಖೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ.10ರಲ್ಲಿರುವ ಸಾರ್ವಜನಿಕ ಉದ್ದಿಮೆಗಳು ಎಂಬುದನ್ನು ಲೋಕೋಪಯೋಗಿ ಎಂಬುದಾಗಿ ಈ ದಿನಾಂಕದಿಂದ ಅನ್ವಯವಾಗುವಂತೆ ಆದೇಶಿಸಿದೆ.