ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಆವಿನಳ್ಳಿಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಇಂದು ವಿದ್ಯುಕ್ತವಾಗಿ ಉದ್ಘಾಟಿಸಲಾಗಿದೆ.
ಇಂದು ಕೆಳದಿ ಭಾರತಿ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಆವಿನಹಳ್ಳಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದಂತ ಕೆಳದಿ ಪಂಚಾಯ್ತಿ ಅಧ್ಯಕ್ಷರಾದಂತ ಗೀತಾ ರಮೇಶ್ ಅವರು, ಕ್ರೀಡೆಗಳು ಮನುಷ್ಯನ ಬದುಕಿಗೆ ಸ್ಪೂರ್ತಿಯಾಗಿವೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲತೆಯನ್ನು ಉಂಟುಮಾಡಬಲ್ಲದು. ಮಕ್ಕಳಿರುವಾಗಲೇ ಕ್ರೀಡೆ ಸಾಂಸ್ಕೃತಿಕ ಮನಸ್ಸನ್ನು ಬೆಳೆಸುವ ಕೆಲಸ ಆಗಬೇಕಿದೆ. ಆರಂಭದಲ್ಲಿಯೇ ಕ್ರೀಡೆಗೆ ಮಹತ್ವ ನೀಡಿದಲ್ಲಿ ಮುಂದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಆಗಬೇಕಾಗಿದೆ ಎಂದರು.
ಶಿವಮೊಗ್ಗ: ಸಾಗರದ ‘ಆರ್ಯ ಈಡಿಗರ ಸಂಘ’ದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮಾಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ ಕ್ರೀಡೆಗಳಿಗೆ ಪ್ರೋತ್ಸಾಹ ನಿಡುವ ಕೆಲಸ ನಿರಂತರವಾಗಿ ಆಗಬೇಕಾಗಿದೆ ಸುತ್ತ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕೆಳದಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯರಾದ ಚಂದ್ರಪ್ಪ ಕಲಸೆ, ಕೆಳದಿ ಪಂಚಾಯಿತಿ ಸದಸ್ಯರಾದ ಶೃತಿ ರಮೇಶ್, ಮಾಸೂರು ಪಂಚಾಯಿತಿ ಸದಸ್ಯರಾದ ನಾರಾಯಣಪ್ಪ, ಶಿಕ್ಷಣ ಸಂಯೋಜಕರು ಹಾಗೂ ಕಸಾಪ ಅಧ್ಯಕ್ಷರಾದ ವಿ.ಟಿ.ಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಮುಖರಾದ ರಾಜು ಪಟೇಲ್, ಪ್ರಶಾಂತ್ , ಗುಮಾನಿ ಇನ್ನೂ ಅನೇಕರು ಹಾಜರಿದ್ದರು
ಇದೆ ಸಂದರ್ಭದಲ್ಲಿ ಟಿಪಿಓ ಗುರುರಾಜ್, ನಿವೃತ್ತ ದೈಹಿಕ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ರಮೇಶ್ ಇವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ರಶ್ಮಿ ಸಂಗಡಿಗರು ಪ್ರಾರ್ಥಿಸಿ ಸುರೇಶ್ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಜಗದೀಶ್ ಹೆಚ್.ಯು ವಂದಿಸಿದರು ಮಹಾಲಕ್ಷ್ಮಿ ನಿರೂಪಿಸಿದರು
ವರದಿ: ಉಮೇಶ್ ಮೊಗವೀರ, ಸಾಗರ