ಮುಂಬೈ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಂತ ರಾಜ್ಯದ ಎರಡು ಬ್ಯಾಂಕ್ ಗಳು ಸೇರಿದಂತೆ ದೇಶದ 17 ಸಹಕಾರ ಬ್ಯಾಂಕ್ ಗಳ ಅರ್ಹ ಗ್ರಾಹಕರಿಗೆ ಠೇವಣಿ ಮೊತ್ತದ ಮೇಲಿನ ವಿಮೆ ಹಣವನ್ನು ಅಕ್ಟೋಬರ್ ನಲ್ಲಿ ಮರುಪಾವತಿ ಮಾಡುವುದಾಗಿ, ಠೇವಣಿ ವಿಮೆ ಹಾಗೂ ಸಾಲಖಾತ್ರಿ ನಿಗಮ ಘೋಷಿಸಿದೆ. ಈ ಮೂಲಕ ಸಹಕಾರ ಬ್ಯಾಂಕ್ ನಲ್ಲಿ ಠೇವಣಿ ಇರಿಸಿದ್ದಂತ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ.
BIGG NEWS : ವೀರ ಸಾವರ್ಕರ್ ಕುರಿತು ಮಾತನಾಡುವುದು ಕಾಂಗ್ರೆಸ್ ನಾಯಕರ ದೌರ್ಬಲ್ಯ : ಸಚಿವ ಸುಧಾಕರ್ ವಾಗ್ದಾಳಿ
ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕ್ ಗಳಿಂದ ಠೇವಣಿ ವಾಪಾಸ್ ಪಡೆಯುವುದು ಸೇರಿದಂತೆ ಹಲವು ರೀತಿಯ ವಹಿವಾಟಿನ ಮೇಲೆ ಕಳೆದ ಜುಲೈನಲ್ಲಿ ನಿರ್ಬಂಧ ಹೇರಿತ್ತು.. ರಿಸರ್ವ್ ಬ್ಯಾಂಕ್ ನ ಉಪಕ್ರಮವಾದ ಡಿಜಿಸಿಜಿಸಿ 5 ಲಕ್ಷ ರೂ ಗಳ ವರೆಗೆ ಬ್ಯಾಂಕ್ ಠೇವಣಿ ಮೇಲೆ ವಿಮೆ ನೀಡುತ್ತದೆ.
ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ
ಕರ್ನಾಟಕದ ಮಸ್ಕಿಯ ಮಲ್ಲಿಕಾರ್ಜುನ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರ ಬ್ಯಾಂಕ್ ಸೇರಿದಂತೆ ಮಹಾರಾಷ್ಟ್ರದ ಎಂಟು, ಉತ್ತರ ಪ್ರದೇಶದ ನಾಲ್ಕು ಮತ್ತು ದೆಹಲಿ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ ಒಂದು ಸಹಕಾರ ಬ್ಯಾಂಕ್ ನ ಗ್ರಾಹಕರು ಅಕ್ಟೋಬರ್ ನಲ್ಲಿ ತಮ್ಮ ಠೇವಣಿ ಮೊತ್ತ ಅಥವಾ ಅದರ ಮೇಲಿನ ವಿಮೆ ಹಣವನ್ನು ಪಡೆಯಲಿದ್ದಾರೆ.
BIGG NEWS : ಕಾಂಗ್ರೆಸ್ `ಮಡಿಕೇರಿ ಚಲೋ’ ಪ್ರತಿಯಾಗಿ ಬಿಜೆಪಿಯಿಂದ ಜನಜಾಗೃತಿ ಸಮಾವೇಶ
ರಿಸರ್ವ್ ಬ್ಯಾಂಕ್ ನಿಯಮಗಳ ಅನುಸಾರ ಬ್ಯಾಂಕ್ ಠೇವಣಿದಾರರು ತಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರ ಸಲ್ಲಿಸಿದ್ದಲ್ಲಿ, ಆರ್ ಬಿಐ ನೇರವಾಗಿ ಠೇವಣಿದಾರರ ಖಾತೆಗಳಿಗೆ ನೇರವಾಗಿ ಠೇವಣಿದಾರರ ಖಾತೆಗಳಿಗೆ ಹಣ ಭರಿಸಲಿದೆ