ಶಿವಮೊಗ್ಗ: 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಗರದ ಮಾಲ್ ಒಂದರಲ್ಲಿ ಸ್ವಾತಂತ್ರ್ಯ ಯೋಧರ ಪೋಟೋ ಇಡಲಾಗಿತ್ತು. ಈ ಸಾಲಿನಲ್ಲಿ ಸಾವರ್ಕರ್ ಪೋಟೋ ಇಟ್ಟಿದ್ದಕ್ಕೆ ಆರೀಫ್ ಎಂಬುವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನದಕ್ಕೆ ಒಪ್ಪಿಸಿದ್ದರು. ಈಗ ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವಾತಂತ್ರ್ಯೋತ್ಸವದ ಕಾರಣ, ಸ್ವಾತಂತ್ರ್ಯ ಹೋರಾಟಗಾರರ ಪೋಟೋಗಳನ್ನು ಹಾಕಲಾಗಿತ್ತು. ಈ ಸಾಲಿನಲ್ಲಿ ವೀರ್ ಸಾವರ್ಕರ್ ಪೋಟೋ ಹಾಕಿದ್ದಕ್ಕೆ ಎಂ.ಡಿ ಷರೀಫ್ ಆಲಿಯಾಸ್ ಆಸೀಫ್ ಎಂಬುವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಹೀಗಾಗಿಯೇ ಸ್ಥಳದಲ್ಲಿ ಬಿಗಿ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದಂತ ದೊಡ್ಡಪೇಟೆ ಠಾಣೆಯ ಪೊಲೀಸರು, ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರಿಗೆ ಆಗಸ್ಟ್ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ಸಂಬಂಧ ಬಂಧಿತ ಆರೋಪಿ ಆರೀಫ್ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದಂತ ಜೆಎಂಎಫ್ ಸಿ ನ್ಯಾಯಾಲಯವು, ಸಾವರ್ಕರ್ ಪೋಟೋ ವಿವಾದದಲ್ಲಿ ಬಂಧಿತನಾಗಿದ್ದಂತ ಆರೀಫ್ ಗೆ ಜಾಮೀನು ಮಂಜೂರು ಮಾಡಿದೆ.
BREAKING NEWS : ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ʻ ಮೊಟ್ಟೆ ಎಸೆತ ಸಂಪತ್ ಬಂಧನ ʼ | Sampath Arrested