ದೆಹಲಿ: ಹರಿಯಾಣದ ಪಾಣಿಪತ್ನಲ್ಲಿ ಬಿಸ್ಕತ್ ನೀಡುವುದಾಗಿ ಆಮಿಷ ಒಡ್ಡಿ 6 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ 6 ವರ್ಷದ ಬಾಲಕಿಯು ಪಾಣಿಪತ್ನ ಸೆಕ್ಟರ್ 29 ರಲ್ಲಿರುವ ತನ್ನ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಸಹೋದರನೊಂದಿಗೆ ಆಟವಾಡುತ್ತಿದ್ದಾಗ ಆರೋಪಿಯು ಆಕೆಗೆ ಬಿಸ್ಕತ್ ನೀಡುವುದಾಗಿ ಆಮಿಷ ಒಡ್ಡಿ ಅಲ್ಲಿಂದ ಅಪಹರಿಸಿ ಅತ್ಯಾಚಾರ ಮಾಡಿ ನಂತರ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಉತ್ತರಾಖಂಡ ಮೂಲದ ಈಶ್ವರ್ ಎಂದು ಗುರುತಿಸಲಾಗಿದೆ. ಪ್ರಸ್ತುತ ಪಾಣಿಪತ್ನಲ್ಲಿ ವಾಸವಾಗಿದ್ದು, ಅಲ್ಲೇ ಧಾಬಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಲೈಂಗಿಕ ದೌರ್ಜನ್ಯದ ನಂತರ ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿದೆ.
ಆರೋಪಿಯ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇಶದ ಜನತೆಗೆ ಬಿಗ್ ಶಾಕ್ ರೆಡಿ: ಮುಂದಿನ ತಿಂಗಳು ಮತ್ತೆ ಜಿಎಸ್ಟಿ ಪರಿಷ್ಕರಣೆ | GST Council Meeting
BIGG NEWS : ‘ವಿಶ್ವದ ಅತಿ ದೊಡ್ಡ ವಿಮಾನ’ ಶೀಘ್ರ ಬೆಂಗಳೂರಿಗೆ ಆಗಮನ ; ಅ.31ರಿಂದ ‘ಜಂಬೋ ಜೆಟ್’ ನಿಯೋಜನೆ