ನವದೆಹಲಿ: ಹಾಲು, ಮೊಸರು, ಅಕ್ಕಿ-ಜೋಳದ ಹಿಟ್ಟು ಸೇರಿದಂತೆ ಆಹಾರ ಪದಾರ್ಥಗಳ ಮೇಲಿನ ವಿಧಿಸಿದ್ದಂತ ತೆರಿಗೆಯನ್ನು ಜಿಎಸ್ಟಿ ಮಂಡಳಿ ವಾಪಾಸ್ ಪಡೆದಿತ್ತು. ಈ ಬೆನ್ನಲ್ಲೇ ಮತ್ತೊಂದು ಸುತ್ತಿನ ದರ ಪರಿಷ್ಕರಣೆಗಾಗಿ ಮುಂದಿನ ತಿಂಗಳು ಮತ್ತೆ ಸಭೆ ಸೇರಲಿದೆ. ಈ ಸಭೆಯಲ್ಲಿ ಕೆಲ ವಿನಾಯ್ತಿ ಸೇರಿದಂತೆ, ಮತ್ತೆ ಕೆಲ ದರ ಪರಿಷ್ಕರಣೆಯೂ ಆಗಲಿದೆ. ಹೀಗಾಗಿ ಮುಂದಿನ ತಿಂಗಳು ದೇಶದ ಜನತೆಗೆ ಮತ್ತೆ ಬಿಗ್ ಶಾಕ್ ರೆಡಿಯಾಗಿದೆ.
ಹೌದು.. ಮುಂದಿನ ತಿಂಗಳ ಸೆಪ್ಟೆಂಬರ್ ನಲ್ಲಿ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕೆಲವು ಸರಕು ಸೇವೆಗಳಿಗಿದ್ದ ವಿನಾಯ್ತಿ ಹಿಂತೆಗೆತ ಮತ್ತು ಕೆಲವು ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಸಿಎಂ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿಯು ಎರಡನೇ ಸುತ್ತಿನ ಜಿಎಸ್ಟಿ ಪರಿಷ್ಕರಣೆಗೆ ಇಳಿಯಲಿದ್ದು, ಬಹುಕಾಲದಿಂದ ಬಾಕಿ ಇಳಿದಿರುವ ಇನ್ ವರ್ಟೆಡ್ ಸುಂಕ ಹೊಂದಾಣಿಕೆ ಕಸರತ್ತು ಕೂಡ ನಡೆಸಲಿದೆ. ಈ ಸಮಿತಿಯ ಶಿಫಾರಸ್ಸು ಆಧರಿಸಿ, ಮುಂದಿನ ಜಿಎಸ್ಟಿ ಮಂಡಳಿಯು ಚರ್ಚೆ ಕೂಡ ಮಾಡಿ, ತೀರ್ಮಾನ ಪ್ರಕಟಿಸಲಿದೆ.