ಬೆಂಗಳೂರು: ಸಚಿವ ಎಸ್.ಟಿ ಸೋಮಶೇಖರ್ ( Minister ST Somashekhar ) ಬೆನ್ನಿಗೆ ನಿಂತು ಮಾಧುಸ್ವಾಮಿ ( Madhuswamy ) ವಿರುದ್ಧ ಸಚಿವ ಮುನಿರತ್ನ ( Minister Munirathna ) ಬ್ಯಾಟಿಂಗ್ ಮಾಡುತ್ತಾರೆಂದರೆ ಬಿಜೆಪಿಯಲ್ಲಿ ( BJP ) ಮೂಲದವರಿಗಿಂತ ವಲಸಿಗರ ಕೈ ಮೇಲಾಯಿತೆ? ಹೊಸ ಬಿಜೆಪಿಗರು ಹಳೇ ಬಿಜೆಪಿಗರ ರಾಜೀನಾಮೆ ಕೇಳುತ್ತಿದ್ದಾರೆ ಎಂದರೆ ವಲಸಿಗರ ಮುಂದೆ ಬಿಜೆಪಿ ಮಂಡಿಯೂರಿ ಶರಣಾಗಿದೆ ಎಂದರ್ಥವಲ್ಲವೇ?! ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪಕ್ಷವು, ಬಿಜೆಪಿಯನ್ನು ಕುಟುಕಿದೆ.
ಸಚಿವ ಎಸ್.ಟಿ ಸೋಮಶೇಖರ್ ಬೆನ್ನಿಗೆ ನಿಂತು ಮಾಧುಸ್ವಾಮಿ ವಿರುದ್ಧ ಸಚಿವ ಮುನಿರತ್ನ ಬ್ಯಾಟಿಂಗ್ ಮಾಡುತ್ತಾರೆಂದರೆ ಬಿಜೆಪಿಯಲ್ಲಿ ಮೂಲದವರಿಗಿಂತ ವಲಸಿಗರ ಕೈ ಮೇಲಾಯಿತೆ?
ಹೊಸ ಬಿಜೆಪಿಗರು ಹಳೇ ಬಿಜೆಪಿಗರ ರಾಜೀನಾಮೆ ಕೇಳುತ್ತಿದ್ದಾರೆ ಎಂದರೆ ವಲಸಿಗರ ಮುಂದೆ @BJP4Karnataka ಮಂಡಿಯೂರಿ ಶರಣಾಗಿದೆ ಎಂದರ್ಥವಲ್ಲವೇ?!#BJPvsBJP
— Karnataka Congress (@INCKarnataka) August 16, 2022
ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ರಾಜ್ಯದ ಇತಿಹಾಸದಲ್ಲೇ ಕ್ಯಾಬಿನೆಟ್ ಸಚಿವರಿಬ್ಬರು ಮತ್ತೊಬ್ಬ ಸಹೋದ್ಯೋಗಿ ಸಚಿವರ ರಾಜೀನಾಮೆ ಕೇಳುತ್ತಿರುವುದು ಇದೇ ಮೊದಲು! ಆ ಮಟ್ಟಿಗೆ ಈ ಸರ್ಕಾರದಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, #BJPvsBJP ಕಿತ್ತಾಟ ಮನೆಮಾಡಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಚಕಾರ ಎತ್ತದಿರುವುದು ತಮ್ಮ ಅಸಾಮರ್ಥ್ಯವನ್ನ ಒಪ್ಪಿದಂತೆ, ಅಲ್ಲವೇ ಬಿಜೆಪಿ ? ಎಂದು ಪ್ರಶ್ನಿಸಿದೆ.
ರಾಜ್ಯದ ಇತಿಹಾಸದಲ್ಲೇ ಕ್ಯಾಬಿನೆಟ್ ಸಚಿವರಿಬ್ಬರು ಮತ್ತೊಬ್ಬ ಸಹೋದ್ಯೋಗಿ ಸಚಿವರ ರಾಜೀನಾಮೆ ಕೇಳುತ್ತಿರುವುದು ಇದೇ ಮೊದಲು!
ಆ ಮಟ್ಟಿಗೆ ಈ ಸರ್ಕಾರದಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, #BJPvsBJP ಕಿತ್ತಾಟ ಮನೆಮಾಡಿದೆ.
ಮುಖ್ಯಮಂತ್ರಿಗಳು ಈ ಬಗ್ಗೆ ಚಕಾರ ಎತ್ತದಿರುವುದು ತಮ್ಮ ಅಸಾಮರ್ಥ್ಯವನ್ನ ಒಪ್ಪಿದಂತೆ, ಅಲ್ಲವೇ @BJP4Karnataka?
— Karnataka Congress (@INCKarnataka) August 16, 2022
‘ಬಸವರಜಾ ಬೊಮ್ಮಾಯಿ ಅವರ ನೇತೃತ್ವದ 40% ಸರ್ಕಾರ ICUನಲ್ಲಿ ವೆಂಟಿಲೇಟರ್ನ ಕೃತಕ ಉಸಿರಾಟದಲ್ಲಿದೆ, ಹಾಗೂ ಇನ್ನು ಎಂಟು ತಿಂಗಳು ಹೇಗಾದರೂ ಮಾಡಿ ಉಸಿರು ಉಳಿಸಿಕೊಳ್ಳುವ ‘ತಳ್ಳಾಟ’ದಲ್ಲಿದೆ ಸರ್ಕಾರ ಎನ್ನುವುದು ಮಾಧುಸ್ವಾಮಿಯವರ ಮಾತಿನ ಅರ್ಥ ಅಲ್ಲವೇ ಬಿಜೆಪಿ ? ಸೋಲಿನ ಹತಾಶೆಯಲ್ಲಿರುವ ಬಿಜೆಪಿಯ #BJPvsBJP ಕಲಹ ಇನ್ನಷ್ಟು ರಂಗೇರಲಿದೆ ಎಂದು ವ್ಯಂಗ್ಯವಾಡಿದೆ.
'@BSBommai ಅವರ ನೇತೃತ್ವದ 40% ಸರ್ಕಾರ ICUನಲ್ಲಿ ವೆಂಟಿಲೇಟರ್ನ ಕೃತಕ ಉಸಿರಾಟದಲ್ಲಿದೆ,
ಹಾಗೂ
ಇನ್ನು ಎಂಟು ತಿಂಗಳು ಹೇಗಾದರೂ ಮಾಡಿ ಉಸಿರು ಉಳಿಸಿಕೊಳ್ಳುವ 'ತಳ್ಳಾಟ'ದಲ್ಲಿದೆ ಸರ್ಕಾರ ಎನ್ನುವುದು ಮಾಧುಸ್ವಾಮಿಯವರ ಮಾತಿನ ಅರ್ಥ ಅಲ್ಲವೇ @BJP4Karnataka?ಸೋಲಿನ ಹತಾಶೆಯಲ್ಲಿರುವ ಬಿಜೆಪಿಯ #BJPvsBJP ಕಲಹ ಇನ್ನಷ್ಟು ರಂಗೇರಲಿದೆ!
— Karnataka Congress (@INCKarnataka) August 16, 2022