ಬೆಂಗಳೂರು: ಹಿಂದೂಗಳ ಗಣಪತಿ ಉತ್ಸವದ ( Ganapati Festival ) ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ನಮ್ ಹಬ್ಬದ ತಂಟೆಗೆ ಬರಬೇಡಿ ಎಂಬುದಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ( Farmer Minister KS Eshwarappa )ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ರೇಸ್ ಕೊರ್ಸ್ ನಿವಾಸದಲ್ಲಿ ಮಾತನಾಡಿದಂತ ಅವರು, ನಿನ್ನೆಯ ಶಿವಮೊಗ್ಗ ಪ್ರಕರಣದಲ್ಲಿ 6 ಜನ ಗುಂಡಾಗಳು ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿದ್ದಾನೆ. ಅವನು ಸಾವು ಬದುಕಿನ ಮಧ್ಯೆ ಹೊರಾಟ ಮಾಡತಾ ಇದಾನೆ ಅಂತನೂ ಡಾಕ್ಟರ್ ಹೇಳ್ತಾರೆ. ಏನು ಹೇಳೋಕೆ ಆಗೋದಿಲ್ಲ ಅಂತನೂ ಹೇಳ್ತಾರೆ ಎಂದರು.
ಇಂದು ನಸುಕಿನಲ್ಲಿ ಈ ಘಟನೆ ಸಂಬಂಧ ಒಂದು ಫೈರಿಂಗ್ ಮಾಡಿದ್ದಾರೆ. ಈವರೆಗೆ ಮೂರು ಜನ ಅರೆಸ್ಟ್ ಬಂದ್ದಾರೆ ಇನ್ನೂ ಮೂರು ಜನ ಸಿಕ್ಕಿಲ್ಲ. ನಮ್ಮ ಶಿವಮೊಗ್ಗ ಜನ ಶಾಂತಿಪ್ರೀಯರ ಊರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ. ಈಗ ಈ ಘಟನೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಈ ಘಟನೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೃತ್ಯ ಎಸೆಗಿದವರನ್ನ ಕೂಡಲೇ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
BIGG NEWS : ಕಳಪೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ; ಅಡುಗೆ ನೌಕರನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ
ಇದು ಕಾನೂನು ಸುವ್ಯವಸ್ಥೆಯ ವೈಪಲ್ಯ ಅಲ್ಲ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿಲ್ಲ. ಪದೇಪದೇ ಈ ತರದ ಘಟನೆ ಆಗ್ತಿದ್ರೂ ವೈಫಲ್ಯ ಆಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೋತಿದೆ. ಈ ಗಲಭೆ ಹಿಂದೆ ಕಾಂಗ್ರೆಸ್ ನವರು ಇದಾರೆ. ಗಲಭೆ ಬಗ್ಗೆ ಕಾಂಗ್ರೆಸ್ ನವರು ಖಂಡಿಸ್ತಿಲ್ಲ ಎಂದರು.
ಸಾವರ್ಕರ್ ಬ್ಯಾನರ್ ಹರಿದು ಹಾಕಿದವನು ಕಾಂಗ್ರೆಸ್ ಕಾರ್ಪೋರೇಟರ್ ಗಂಡ. ಹೆಂಡತಿ ಕಾಂಗ್ರೆಸ್ ಪಾಲಿಕೆ ಸದಸ್ಯ, ಗಂಡ ಎಸ್ ಡಿ ಪಿ ಐ ಕಾರ್ಯಕರ್ತ. ಕಾಂಗ್ರೆಸ್ನವರು ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುತ್ತಾರೆ ಎಂದು ಆರೋಪ ಮಾಡ್ತಾರೆ. ಆದರೆ ಕೋಮು ಗಲಭೆ ಸೃಷ್ಟಿಸುತ್ತಿರುವವರು ಕಾಂಗ್ರೆಸ್ ಕಾರ್ಪೋರೇಟರ್ ಗಂಡ. ಅವನ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಿ, ಆದರೆ ನೀವು ಕ್ರಮ ತೆಗೆದುಕೊಳ್ಳಲ್ಲ ಎಂದು ಹೇಳಿದರು.