ಬೆಂಗಳೂರು: ನೆಹರೂ ( Neharu ) ಸ್ವಾತಂತ್ರ್ಯಕ್ಕಾಗಿ ಏನು ಹೋರಾಟ ಮಾಡಿದ್ದಾರೆ ಎಂದು BJPಯವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ನೆಹರೂ ಹೋರಾಟದ ಬಗ್ಗೆ ನಿನ್ನೆಯಷ್ಟೆ ಮಾತಾಡಿದ ಪ್ರಧಾನಿ ಮೋದಿಯವರ ( PM Modi ) ಬಳಿ ಕೇಳಲಿ. ಇರಲಿ, ನೆಹರೂ ಹೋರಾಟದ ಬಗ್ಗೆ ಪ್ರಶ್ನಿಸುವ BJPಯವರು ಸಾವರ್ಕರ್ ಹೋರಾಟದ ಬಗ್ಗೆಯೂ ಹೇಳಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? ಎಂಬುದಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ( Dinesh Gundu Rao ) ಪ್ರಶ್ನಿಸಿದ್ದಾರೆ.
BIG NEWS: ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಂತಿದೆ – ಕಾಂಗ್ರೆಸ್
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಇತಿಹಾಸ ತಿರುಚಲು ಹೊರಟಿರುವ ಬೊಮ್ಮಾಯಿಯವರ ನಡೆಯ ಬಗ್ಗೆ ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಜಗದೀಶ್ ಮನಮುಟ್ಟುವಂತೆ ಲೇಖನ ಬರೆದಿದ್ದಾರೆ. ಬೊಮ್ಮಾಯಿಯವರಿಗೆ ಪುರುಸೊತ್ತಿದ್ದರೆ ಈ ಲೇಖನ ಓದಿ ತಾನೇನು ಮಾಡುತ್ತಿದ್ದೇನೆ? ಈ ನಾಡಿನ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
1
ಇತಿಹಾಸ ತಿರುಚಲು ಹೊರಟಿರುವ ಬೊಮ್ಮಾಯಿಯವರ ನಡೆಯ ಬಗ್ಗೆ ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಜಗದೀಶ್ ಮನಮುಟ್ಟುವಂತೆ ಲೇಖನ ಬರೆದಿದ್ದಾರೆ.ಬೊಮ್ಮಾಯಿಯವರಿಗೆ ಪುರುಸೊತ್ತಿದ್ದರೆ ಈ ಲೇಖನ ಓದಿ ತಾನೇನು ಮಾಡುತ್ತಿದ್ದೇನೆ?
ಈ ನಾಡಿನ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. pic.twitter.com/8QPM3Z7QGA
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 16, 2022
ಬೊಮ್ಮಾಯಿಯವರೆ, ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸ್ವತಃ ಪ್ರಧಾನಿ ಮೋದಿಯವರೆ ದೇಶಕ್ಕೆ ನೆಹರೂ ಕೊಟ್ಟ ಕೊಡುಗೆ ಮತ್ತು ತ್ಯಾಗವನ್ನು ಸ್ಮರಿಸಿದ್ದಾರೆ. ನೆಹರೂ ಇತಿಹಾಸ ಪುರುಷ. ನಿಮ್ಮ ರಾಷ್ಟ್ರೀಯ ನಾಯಕರಿಗೂ ಈ ಸತ್ಯ ಗೊತ್ತಿದೆ. ಹೀಗಿರುವಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆಹರೂರವರನ್ನು ಕಡೆಗಣಿಸಿ ನಿಮ್ಮ ಸಣ್ಣತನ ತೋರಿಸಿದ್ದು ಸರಿಯೇ? ಎಂದು ಕಿಡಿಕಾರಿದ್ದಾರೆ.
2
ಬೊಮ್ಮಾಯಿಯವರೆ, ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸ್ವತಃ ಪ್ರಧಾನಿ ಮೋದಿಯವರೆ ದೇಶಕ್ಕೆ ನೆಹರೂ ಕೊಟ್ಟ ಕೊಡುಗೆ ಮತ್ತು ತ್ಯಾಗವನ್ನು ಸ್ಮರಿಸಿದ್ದಾರೆ. ನೆಹರೂ ಇತಿಹಾಸ ಪುರುಷ.
ನಿಮ್ಮ ರಾಷ್ಟ್ರೀಯ ನಾಯಕರಿಗೂ ಈ ಸತ್ಯ ಗೊತ್ತಿದೆ.
ಹೀಗಿರುವಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆಹರೂರವರನ್ನು ಕಡೆಗಣಿಸಿ ನಿಮ್ಮ ಸಣ್ಣತನ ತೋರಿಸಿದ್ದು ಸರಿಯೇ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 16, 2022
ನೆಹರೂ ಸ್ವಾತಂತ್ರ್ಯಕ್ಕಾಗಿ ಏನು ಹೋರಾಟ ಮಾಡಿದ್ದಾರೆ ಎಂದು BJPಯವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ನೆಹರೂ ಹೋರಾಟದ ಬಗ್ಗೆ ನಿನ್ನೆಯಷ್ಟೆ ಮಾತಾಡಿದ ಪ್ರಧಾನಿ ಮೋದಿಯವರ ಬಳಿ ಕೇಳಲಿ. ಇರಲಿ, ನೆಹರೂ ಹೋರಾಟದ ಬಗ್ಗೆ ಪ್ರಶ್ನಿಸುವ BJPಯವರು ಸಾವರ್ಕರ್ ಹೋರಾಟದ ಬಗ್ಗೆಯೂ ಹೇಳಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? ಎಂದು ಪ್ರಶ್ನಿಸಿದ್ದಾರೆ.
3
ನೆಹರೂ ಸ್ವಾತಂತ್ರ್ಯಕ್ಕಾಗಿ ಏನು ಹೋರಾಟ ಮಾಡಿದ್ದಾರೆ ಎಂದು BJPಯವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ನೆಹರೂ ಹೋರಾಟದ ಬಗ್ಗೆ ನಿನ್ನೆಯಷ್ಟೆ ಮಾತಾಡಿದ ಪ್ರಧಾನಿ ಮೋದಿಯವರ ಬಳಿ ಕೇಳಲಿ.ಇರಲಿ, ನೆಹರೂ ಹೋರಾಟದ ಬಗ್ಗೆ ಪ್ರಶ್ನಿಸುವ BJPಯವರು ಸಾವರ್ಕರ್ ಹೋರಾಟದ ಬಗ್ಗೆಯೂ ಹೇಳಲಿ.
ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 16, 2022
ದೇಶದ ಸ್ವಾತಂತ್ರ್ಯ ಸಂಗ್ರಾಮ ಏಕವ್ಯಕ್ತಿ ಪ್ರದರ್ಶನವಾಗಿರಲಿಲ್ಲ. ಹಲವು ಮಹನೀಯರ ಸಾಂಘಿಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಗಾಂದೀಜಿ, ನೆಹರೂ, ಆಜಾದ್, ಪಟೇಲ್, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವು ನಾಯಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತೇ ಹೊರತು, ಬ್ರಿಟಿಷರಿಗೆ ಬರೆದ ಕ್ಷಮಾಪಣೆ ಪತ್ರದಿಂದಲ್ಲ ಎಂದು ಹೇಳಿದ್ದಾರೆ.
4
ದೇಶದ ಸ್ವಾತಂತ್ರ್ಯ ಸಂಗ್ರಾಮ ಏಕವ್ಯಕ್ತಿ ಪ್ರದರ್ಶನವಾಗಿರಲಿಲ್ಲ.
ಹಲವು ಮಹನೀಯರ ಸಾಂಘಿಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.
ಗಾಂದೀಜಿ, ನೆಹರೂ, ಆಜಾದ್, ಪಟೇಲ್, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವು ನಾಯಕರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತೇ ಹೊರತು, ಬ್ರಿಟಿಷರಿಗೆ ಬರೆದ ಕ್ಷಮಾಪಣೆ ಪತ್ರದಿಂದಲ್ಲ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 16, 2022