Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಛಲವಾದಿ ನಾರಾಯಣಸ್ವಾಮಿ ಹೋರಾಟವನ್ನು ಬಿಜೆಪಿ ಗುರುತಿಸಿದೆ: ಬಿ.ವೈ ವಿಜಯೇಂದ್ರ
KARNATAKA

ಛಲವಾದಿ ನಾರಾಯಣಸ್ವಾಮಿ ಹೋರಾಟವನ್ನು ಬಿಜೆಪಿ ಗುರುತಿಸಿದೆ: ಬಿ.ವೈ ವಿಜಯೇಂದ್ರ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಶೋಷಿತ ಪೀಡಿತ ಸಮುದಾಯದ ದನಿಯಾಗಿರುವ ಹೋರಾಟಗಾರ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಸನ್ನಿವೇಶ ತುಂಬಾ ಸಂತೋಷ ಅನಿಸುತ್ತಿದೆ. ಹೋರಾಟದ ಕಿಚ್ಚು ನಶಿಸುತ್ತಿರುವ ಕಾಲಘಟ್ಟವಿದು. ವಿಧಾನ ಪರಿಷತ್ ವಿಪಕ್ಷ ನಾಯಕ ಯಾರಾಗಬೇಕೆಂಬ ಚರ್ಚೆ ನಾನಾ ರೀತಿ ನಡೆಯುತ್ತಿತ್ತು. ರಾಜ್ಯಾಧ್ಯಕ್ಷನಾಗಿ, ಬಿ.ಎಸ್. ಯಡಿಯೂರಪ್ಪ ಅವರ ಮಗನಾಗಿ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ಮಾತಾಡಿದೆ. ಛಲವಾದಿ ನಾರಾಯಣ ಸ್ವಾಮಿ ಅವರು ಬುಡಕಟ್ಟು ನಾಯಕರಾಗಿ ಹೋರಾಟಗಾರರಾಗಿ ಮೇಲೆ ಬಂದವರು. ಅವರನ್ನು ಗುರುತಿಸಬೇಕಾದ ಅಗತ್ಯವಿದೆ ಎಂದು ಹೇಳಿದಾಗ ಹೆಮ್ಮೆಯಿಂದ ಒಪ್ಪಿಗೆ ಸೂಚಿಸಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ರೈತಾಪಿ ವರ್ಗದ ಪರವಾಗಿ ಹೋರಾಟ ಮಾಡಿದ ರಾಜ್ಯದ ಏಕೈಕ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು. ಅವರನ್ನು ಎಲ್ಲ ಕಡೆ ಹೋರಾಟಗಾರ ಎಂದು ಗುರುತಿಸುತ್ತಾರೆ. ಮಾಜಿ ಸಿಎಂ ಎಂದು ಅಲ್ಲ. ಧ್ವನಿ ಇಲ್ಲದವರ ಪರವಾಗಿ ಹೋರಾಟ ಮಾಡಿದರು. ಅವರು ರಾಜ್ಯದಲ್ಲಿ ಮಾಡಿದಷ್ಟು ಹೋರಾಟಗಳು ಬೇರೆ ಯಾರೂ ಮಾಡಿರಲು ಸಾಧ್ಯವಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದು ಬಂದವರು. ಶಿಕಾರಿಪುರ ಮನೆಯಲ್ಲಿ ತಂದೆ ತಾಯಿಯ ಆದರ್ಶ ನಮ್ಮ ಮನೆಯಲ್ಲಿ ಇಂದಿನ ವರೆಗೂ ನಡೆದು ಬಂದಿದೆ. ಮನೆಗೆ ಯಾರು ಬಂದರೂ ಯಾವ ಜಾತಿ ವರ್ಗ ಎಂದು ಕೇಳುವುದಿಲ್ಲ. ಊಟ ಆಗಿದೆಯಾ, ತಿಂಡಿ ಆಗಿದೆಯಾ ಎಂದಷ್ಟೇ ಕೇಳುತ್ತಿದ್ದರು. ಅತಿಥಿ ಸತ್ಕಾರ ಮಾಡುತ್ತಿದ್ದರು.

ನಾವು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತೇವೆ. ಯಡಿಯೂರಪ್ಪರ ಮಗನಾಗಿ ರಾಜಕಾರಣ ಮಾಡುವುದಿಲ್ಲ, ಅದರ ಬದಲು ತಂದೆಯವರ ಮಾರ್ಗದರ್ಶನ ನೆನಪು ಮಾಡಿಕೊಳ್ಳುವೆ ಎಂದು ವಿಜಯೇಂದ್ರ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳಿಕೊಂಡು 50-60 ವರ್ಷ ಆಡಳಿತ ಮಾಡಿದ ಪಕ್ಷ ಅಂಬೇಡ್ಕರರ ಅಂತ್ಯ ಸಂಸ್ಕಾರವನ್ನು ಕೂಡ ಗೌರವಯುತವಾಗಿ ಮಾಡಲಿಲ್ಲ. ಅಂಬೇಡ್ಕರ್ ಹುಟ್ಟೂರು ಮೌ ಪಟ್ಟಣಕ್ಕೆ ದೇಶದ ಪ್ರಧಾನಿಯಾಗಿ ಮೊದಲ ಬಾರಿ ಭೇಟಿ ಕೊಟ್ಟವರು ನರೇಂದ್ರ ಮೋದಿಯವರು. ಮೋದೀಜಿ ಪ್ರಧಾನ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೊಳ್ಳೇಗಾಲದ ಮಹೇಶ್ ಅವರನ್ನು ನಾನು ಮರೆಯಬಾರದು. ಅವತ್ತು ಶಾಸಕರಾಗಿ ಮಂತ್ರಿಯಾಗಿದ್ದರೂ ಏನೂ ಅಪೇಕ್ಷೆ ಪಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಮುಂದೆ ಬಂದವರು ಕೊಳ್ಳೇಗಾಲದ ಮಹೇಶಣ್ಣ ಎಂದು ವಿಜಯೇಂದ್ರ ಸ್ಮರಿಸಿಕೊಂಡರು.

ನಗರಕ್ಕೆ ಸೀಮಿತವಾಗಿದ್ದ ಪಕ್ಷ ಎಂಬ ಹೆಸರಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋದವರು ಯಡಿಯೂರಪ್ಪ, ಅನಂತಕುಮಾರ್ ಅವರಂತಹ ಹಿರಿಯ ಮುಖಂಡರು,. ಬ್ರಾಹ್ಮಣರ ಪಕ್ಷ, ನಗರಕ್ಕೆ ಸೀಮಿತವಾಗಿದ್ದ ಪಕ್ಷ ಎಂಬ ಹೆಸರಿನಿಂದ ಎಲ್ಲರ ಪಕ್ಷ ಎಂಬ ಹೆಸರಿಗೆ ಬದಲಾವಣೆಗೆ ಕಾರಣರಾದವರು ಈ ಮುಖಂಡರು. ಶೋಷಿತ ಸಮುದಾಯದ ಧ್ವನಿಯಾಗಿದ್ದ ಎಲ್‌ಜಿ ಹಾವನೂರು ಅವರನ್ನು ಬಿಜೆಪಿಗೆ ಕರೆತಂದವರು ಬಿಎಸ್‌ವೈ. ಕೇಂದ್ರ ಸಚಿವ ಸಂಪುಟದಲ್ಲಿ 12ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಪಂಗಡದವರಿದ್ದಾರೆ. ಅವರಿಗೆಲ್ಲ ಬಿಜೆಪಿ ಸ್ಥಾನಮಾನ, ಗೌರವ ನೀಡಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸರಿಯಾದ ದಿಕ್ಕಿನಲ್ಲಿ ನಡೆಯೋಣ ಎಂದು ವಿಜಯೇಂದ್ರ ಹೇಳಿದರು.

‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ

BIG NEWS: ಸರ್ಕಾರದ ಎಲ್ಲಾ ಇಲಾಖೆ ‘ನಾಮಫಲಕ’ಗಳನ್ನು ‘ಕನ್ನಡ’ದಲ್ಲೇ ಪ್ರದರ್ಶಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

2 Mins Read

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

1 Min Read

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

1 Min Read
Recent News

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

​ಬಾದಾಮಿ ಖರೀದಿಯಲ್ಲಿ ₹82 ರೂಪಾಯಿ ವಂಚನೆ: ಗ್ರಾಹಕ ನ್ಯಾಯಾಲಯದಲ್ಲಿ ಹೋರಾಡಿ ₹7,000 ಪರಿಹಾರ ಗೆದ್ದ ಗ್ರಾಹಕ!

State News
KARNATAKA

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ದಿನದಿಂದ ದಿನಕ್ಕೆ ಪೆಟ್ರೋಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ, ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ವಿನೂತನ ಕಳ್ಳರ ಗ್ಯಾಂಗ್…

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.