ಶಿವಮೊಗ್ಗ : ಆಗಸ್ಟ್ 19 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದ್ದು ಮಾಂಸ ಮಾರಾಟ ಉದ್ದಿಮೆದಾರರು ಅಂದು ಮಾರಾಟ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
BIG BREAKING NEWS: ಆ.17ರಿಂದ ಅಮುಲ್ ಹಾಲಿನ ದರ ಪ್ರತಿ ಲೀಟರ್ಗೆ ₹ 2 ಹೆಚ್ಚಳ | Amul milk prices hiked
ಆ. 18: ವಿದ್ಯುತ್ ವ್ಯತ್ಯಯ
ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 18/08/2022 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 02.00 ರವರೆಗೆ ಸವಳಂಗರಸ್ತೆ, ಸರ್ಜಿ ಕನ್ವೆಷನಲ್ ಹಾಲ್ ಎದುರು, ನವುಲೆ, ಹೊಸೂರು, ಮುರುಡಲಿಂಗೇಶ್ವರ ಬಡಾವಣೆ, ಜ್ಯೋತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.