ಲಕ್ನೋ: ನೋಯ್ಡಾದ ಸೂಪರ್ಟೆಕ್ನ ಅವಳಿ ಟವರ್ ಕಟ್ಟಡ ನೆಲಸಮದ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ
ನೋಯ್ಡಾದ ಅವಳಿ ಟವರ್ ಕಟ್ಟಡವನ್ನು ಆ.21 ನೆಲಸಮಗೊಳಿಸಲು ಸುಪ್ರೀಂ ಸೂಚಿಸಿತ್ತು. ಆದರೆ ಅವಧಿ ವಿಸ್ತರಣೆ ಕೋರಿ ನೋಯ್ಡಾ ಪ್ರಾಧಿಕಾರ ಮನವಿ ಸಲ್ಲಿಸಿತ್ತು. ಇದನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್ ಕಟ್ಟಡ ನೆಲಸಮ ದಿನಾಂಕವನ್ನು ಆ.28ಕ್ಕೆ ವಿಸ್ತರಿಸಿದೆ.
BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ
ಕಟ್ಟಡ ಉಪವಿಧಿಗಳ ಉಲ್ಲಂಘನೆಯಿಂದಾಗಿ 40 ಅಂತಸ್ತಿನ ಸೂಪರ್ ಸ್ಟ್ರಕ್ಚರ್ ಗಳ ಯೋಜಿತ ನೆಲಸಮಕ್ಕೆ ಆದೇಶಿಸಲಾಗಿದೆ.ನ್ಯಾಯಾಲಯವು ನೇಮಿಸಿದ ತಾಂತ್ರಿಕ ತಜ್ಞರ ವರದಿಯನ್ನು ಪರಿಶೀಲಿಸಿದ ನಂತರ ದಿನಾಂಕವನ್ನು ವಿಸ್ತರಿಸಲು ನ್ಯಾಯಾಲಯ ಅನುಮತಿ ನೀಡಿತು. ಸುಮಾರು 100 ಮೀಟರ್ ಎತ್ತರದ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಆದೇಶಿಸಿತ್ತು.
ಆಗಸ್ಟ್ 21 ರಂದು ಮಧ್ಯಾಹ್ನ 2:30 ಕ್ಕೆ ನೆಲಸಮಗೊಳಿಸಲು ಇದುವರೆಗೆ ನಿಗದಿಯಾಗಿದ್ದ ಅವಳಿ ಕಟ್ಟಡಗಳನ್ನು ಈಗ ಆಗಸ್ಟ್ 28 ರಂದು ನೆಲಸಮಗೊಳಿಸಲಾಗುವುದು.