ಶಿವಮೊಗ್ಗ : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2022ರ ಮುಂಗಾರು ಹಂಗಾಮಿನಲ್ಲಿ ಮುಸುಕಿನಜೋಳ ಬೆಳೆಗೆ ಬೆಳೆ ವಿಮೆ ನೋಂದಣಿ ಮಾಡಿಸಿರುವ ರೈತರು ಒಂದು ವೇಳೆ ಬೆಳೆ ಸಂಪೂರ್ಣ ಹಾನಿಯಾಗಿದ್ದಲ್ಲಿ ಸ್ಥಳೀಯ ಪ್ರಕೃತಿ ವಿಕೋಪ ಘಟಕದಡಿ ವಿಮಾ ಸಂಸ್ಥೆಯಿಂದ ಪರಿಹಾರಕ್ಕಾಗಿ ವಿಮೆಗೆ ನೋಂದಣಿ ಮಾಡಿಸಿರುವ ಸ್ವೀಕೃತಿ ಪ್ರತಿ, ಪಹಣಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ದಿ: 16/08/2022ರೊಳಗಾಗಿ ತಮ್ಮ ವ್ಯಾಪ್ತಿಯಲ್ಲಿ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.
BIG BREAKING NEWS: ಕೋವಿಡ್ ಹೆಚ್ಚಳದ ಹಿನ್ನಲೆ: ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯ – ಸಚಿವ ಸುಧಾಕರ್ ಘೋಷಣೆ
ರೈತರ ಅರ್ಜಿ ವಿವರಗಳನ್ನು ವಿಮಾ ಸಂಸ್ಥೆಗೆ ಕಳುಹಿಸಿದ ನಂತರ ವಿಮಾ ಸಂಸ್ಥೆಯವರು ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆ ಹಾನಿ ಪ್ರಮಾಣದ ಮೇಲೆ ವೈಯುಕ್ತಿಕ ನಷ್ಟ ಪರಿಹಾರ ನಿರ್ಧರಿಸಿ ಕ್ಲೈಂ ನೀಡಲು ಕ್ರಮವಹಿಸುವರು. ಬೆಳೆಹಾನಿಗೊಳಗಾಗಿರುವ ರೈತರು ಕೂಡಲೇ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
BIGG NEWS : ಸಾರ್ವಜನಿಕರ ಗಮನಕ್ಕೆ : `ಶಾಂತಿಸಾಗರ’ ಸುತ್ತಮುತ್ತಾ ಜನರ ಓಡಾಟಕ್ಕೆ ನಿಷೇಧ