ಬೆಂಗಳೂರು: ಕರ್ನಾಟಕದ ಅನೇಕ ಭಾಗಗಳಲ್ಲಿ ಸರಿಯಾಗಿ 4ಜಿ ನೆಟ್ವರ್ಕ್ ( 4G Network ) ಸಿಗದೇ ಜನರು ತೊಂದರೆ ಅನುಭವಿಸುತ್ತಾ ಇದ್ದರು. ಈ ಗ್ರಾಮಗಳಿಗೆ 4ಜಿ ಸೇವೆ ಒದಗಿಸೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ( Central Government ) ಯೋಜನೆಗೆ ಅನುಮತಿ ನೀಡಿದೆ. ಈ ಮೂಲಕ ರಾಜ್ಯದ ಗ್ರಾಮೀಣ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು, ಪ್ರಧಾನಿ ನರೇಂದ್ರ ಮೋದಿ ಅವರ ಅಂತ್ಯೋದಯ ಯೋಜನೆ ಅಡಿ 4G ತರಂಗಾತರ ಮೊಬೈಲ್ ಜೋಡಣೆಯಲ್ಲಿ ಸೌಲಭ್ಯವಂಚಿತವಾಗಿದ್ದ ದೇಶದ 24680 ಗ್ರಾಮಗಳಿಗೆ 26316 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದರಲ್ಲಿ ನಮ್ಮ ಕರ್ನಾಟಕದ 1048 ಗ್ರಾಮಗಳಿಗೆ ಈ ಸೇವೆ ಬರಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ @narendramodi ಅವರ ಅಂತ್ಯೋದಯ ಯೋಜನೆ ಅಡಿ 4G ತರಂಗಾತರ ಮೊಬೈಲ್ ಜೋಡಣೆಯಲ್ಲಿ ಸೌಲಭ್ಯವಂಚಿತವಾಗಿದ್ದ ದೇಶದ 24680 ಗ್ರಾಮಗಳಿಗೆ 26316 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದರಲ್ಲಿ ನಮ್ಮ ಕರ್ನಾಟಕದ 1048 ಗ್ರಾಮಗಳಿಗೆ ಈ ಸೇವೆ ಬರಲಿದೆ. pic.twitter.com/Idtano3Vt8
— Pralhad Joshi (@JoshiPralhad) August 10, 2022
ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 11 ಗ್ರಾಮಗಳು- ಅಳ್ನಾವರ ತಾಲೂಕಿನ ಕಿವಡೆಬೈಲು, ಕಲಘಟಗಿ ತಾಲೂಕಿನ ಜಯನಗರ, ಬಿದರಗಡ್ಡಿ, ಸುತಘಟ್ಟಿ, ಕಳಸನಕೊಪ್ಪ, ದೊಂಬ್ರಿಕೊಪ್ಪ, ಹುಬ್ಬಳ್ಳಿ ತಾಲೂಕಿನ ಶಾಂತಿನಗರ, ಧಾರವಾಡ ತಾಲೂಕಿನ ಬೆಳ್ಳಗಟ್ಟಿ, ಹುಣಸಿಕಮರಿ, ಶಿಗ್ಗಾಂವ ತಾಲೂಕಿನ ಬಸವನಕೊಪ್ಪ, ಗ್ರಾಮಗಳು ಈ ಯೋಜನೆಯಲ್ಲಿ ಬರಲಿವೆ ಎಂದು ಹೇಳಿದ್ದಾರೆ.
ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 11 ಗ್ರಾಮಗಳು- ಅಳ್ನಾವರ ತಾಲೂಕಿನ ಕಿವಡೆಬೈಲು, ಕಲಘಟಗಿ ತಾಲೂಕಿನ ಜಯನಗರ, ಬಿದರಗಡ್ಡಿ, ಸುತಘಟ್ಟಿ, ಕಳಸನಕೊಪ್ಪ, ದೊಂಬ್ರಿಕೊಪ್ಪ, ಹುಬ್ಬಳ್ಳಿ ತಾಲೂಕಿನ ಶಾಂತಿನಗರ, ಧಾರವಾಡ ತಾಲೂಕಿನ ಬೆಳ್ಳಗಟ್ಟಿ, ಹುಣಸಿಕಮರಿ, ಶಿಗ್ಗಾಂವ ತಾಲೂಕಿನ ಬಸವನಕೊಪ್ಪ, ಗ್ರಾಮಗಳು ಈ ಯೋಜನೆಯಲ್ಲಿ ಬರಲಿವೆ.
— Pralhad Joshi (@JoshiPralhad) August 10, 2022
ಈ ಬೃಹತ್ ಯೋಜನೆ ಅಡಿ ದುರ್ಗಮ ಪ್ರದೇಶದ ಮತ್ತು ಬಹುದೂರವರ್ತಿಯಾದ ಗ್ರಾಮಗಳಿಗೆ ಈ ಆಧುನಿಕ ಸಂಪರ್ಕ ದೊರೆಯುವದರ ಮುಖಾಂತರ ಆ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಈ ಬೃಹತ್ ಯೋಜನೆ ಅಡಿ ದುರ್ಗಮ ಪ್ರದೇಶದ ಮತ್ತು ಬಹುದೂರವರ್ತಿಯಾದ ಗ್ರಾಮಗಳಿಗೆ ಈ ಆಧುನಿಕ ಸಂಪರ್ಕ ದೊರೆಯುವದರ ಮುಖಾಂತರ ಆ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಇದು ನೆರವಾಗಲಿದೆ.
— Pralhad Joshi (@JoshiPralhad) August 10, 2022
ಈ ಹೊಸ 4G ನೆಟ್ವರ್ಕ್ ಸೇವೆ ಆರಂಭದಿಂದ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ, ಕೈಗಾರಿಕೆ, ಮೂಲಸೌಕರ್ಯ ತಂತ್ರಜ್ಞಾನ ಮತ್ತಿತರ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸುಧಾರಣೆಗಳು ಆಗಲಿವೆ. ಪ್ರತಿ ವಲಯದ ಬೆಳವಣಿಗೆಯಲ್ಲಿ ಈ ತರಂಗಾಂತರ ಸೇವೆ ಪ್ರಮುಖ ಪಾತ್ರ ವಹಿಸಲಿದೆ, ಉದ್ಯೋಗವೂ ಸೃಷ್ಟಿಯಾಗಲಿದೆ. ಈ ಯೋಜನೆಗೆ ಅನುಮತಿ ನೀಡಿದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಹೊಸ 4G ನೆಟ್ವರ್ಕ್ ಸೇವೆ ಆರಂಭದಿಂದ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯಮ, ಕೈಗಾರಿಕೆ, ಮೂಲಸೌಕರ್ಯ ತಂತ್ರಜ್ಞಾನ ಮತ್ತಿತರ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸುಧಾರಣೆಗಳು ಆಗಲಿವೆ. ಪ್ರತಿ ವಲಯದ ಬೆಳವಣಿಗೆಯಲ್ಲಿ ಈ ತರಂಗಾಂತರ ಸೇವೆ ಪ್ರಮುಖ ಪಾತ್ರ ವಹಿಸಲಿದೆ, ಉದ್ಯೋಗವೂ ಸೃಷ್ಟಿಯಾಗಲಿದೆ.
— Pralhad Joshi (@JoshiPralhad) August 10, 2022