ಬಿಹಾರ: ಜೆಡಿಯು-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಸರ್ಕಾರ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಏರಲು ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
BIG NEWS: ‘ಸೂಪರ್ ಸ್ಟಾರ್ ರಜನಿ ಕಾಂತ್’ ಪತ್ನಿ ಲತಾಗೆ ಸಂಕಷ್ಟ: ‘ಪೋರ್ಜರಿ ಕೇಸ್’ ಮುಂದುವರೆಸಲು ಹೈಕೋರ್ಟ್ ಅಸ್ತು
ಈ ಬಗ್ಗೆ ಆರ್ ಜೆಡಿಯಿಂದ ಮಾಹಿತಿ ನೀಡಿದ್ದು, ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನೇತೃತ್ವದ ‘ಮಹಾಘಟಬಂಧನ್’ (ಮಹಾ ಮೈತ್ರಿಕೂಟ) ನಾಳೆ ಮಧ್ಯಾಹ್ನ 2ಕ್ಕೆ ಅಸ್ಥಿತ್ವಕ್ಕೆ ಬರಲಿದೆ.
ನಾಳೆ ರಾಜಭವನದಲ್ಲಿ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ರೇ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ತಿಳಿಸಿದೆ.
Bihar | JD(U)-RJD led 'Mahagathbandhan' (Grand Alliance) in Bihar to take oath at 4pm, tomorrow pic.twitter.com/OMQrcT0xYs
— ANI (@ANI) August 9, 2022