ಬೆಂಗಳೂರು: 75ನೇ ಸ್ವಾಂತ್ರ್ಯ ಅಮೃತ ಮಹೋತ್ಸವದ ಸಲುವಾಗಿ ಕಾಂಗ್ರೆಸ್ ನಿಂದ ( Congress ) ಆಗಸ್ಟ್ 15ರಂದು ಪಾದಯಾತ್ರೆ ಆಯೋಜಿಸಲಾಗಿದೆ. ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತ ಕಾರ್ಯಕರ್ತರಿಗೆ ನೀಡುವ ಸಲುವಾಗಿ ಕಾಂಗ್ರೆಸ್ ನಿಂದ ಟೋಪಿ, ಟೀ ಶರ್ಟ್ ಮಾಡಿಸಲಾಗಿದೆ. ಇಂತಹ ಟೀ ಶರ್ಟ್, ಟೋಪಿಯನ್ನು ಬಿಡುಗಡೆ ಮಾಡಿದಂತ ಕಾಂಗ್ರೆಸ್ ನಾಯಕರು ( Congress Leader ) ಯಾರಿಗೆ ಯಾರು ಟೋಪಿ ಹಾಕಿದ್ರೇ ಎನ್ನುವ ಬಗ್ಗೆ ಮುಂದೆ ಓದಿ..
ಕೆಪಿಸಿಸಿಯಿಂದ 75ನೇ ಸ್ವಾತಂತ್ರ ಅಮೃತ ಮಹೋತ್ಸವದಂದು ಪಾದಯಾತ್ರೆ ನಡೆಸಲು ನಿರ್ಧಿರಸಿಲಾಗಿದೆ. ಈ ಪಾದಯಾತ್ರೆಗೆ ಮಾಡಿಸಿದ್ದ ಟೋಪಿಗಳು, ಟಿ ಶರ್ಟ್ ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿ.ಕೆ ಹರಿಪ್ರಸಾದ್ ಸೇರಿದಂತೆ ಅನೇಕ ಮುಖಂಡರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ: ಸಿಎಂ ಕಾಲೆಳೆದ ಕಾಂಗ್ರೆಸ್
ಟೋಪಿ, ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯಗೆ ಡಿಕೆ ಶಿವಕುಮಾರ್ ಟೋಪಿ ಹಾಕಿದ್ರೇ, ಡಿಕೆ ಶಿವಕುಮಾರ್ ಗೆ ಸಿದ್ಧರಾಮಯ್ಯ ಹಾಕಿದ್ರು.. ಬಿಕೆ ಹರಿ ಪ್ರಸಾದ್ ಅವರು, ವಿ.ಎಸ್ ಉಗ್ರಪ್ಪ ಅವರಿಗೆ ಟೋಪಿ ಹಾಕಿದ್ರು..
ಇನ್ನೂ ಸಿದ್ಧರಾಮಯ್ಯ ( Siddaramaiah ) ಅವರ ಕೈಯಿಂದ ಡಿ.ಕೆ ಶಿವಕುಮಾರ್ ( DK Shivakumar ) ಅವರು, ಕೆಜೆ ಜಾರ್ಜ್ ಗೆ ಹಾಕಿಸಿದ್ರು. ಈ ಬಳಿಕ ಸ್ವತಹ ತಾವೇ ಸಿದ್ಧರಾಮಯ್ಯಗೆ ಡಿಕೆ ಶಿವಕುಮಾರ್ ಟೋಪಿ ಹಾಕಿದ್ರು. ಆಗ ನಗುನಗುತ್ತಲೇ ಸಿದ್ದರಾಮಯ್ಯ ಡಿಕೆಶಿಯಿಂದ ಟೋಪಿ ಹಾಕಿಸಿಕೊಂಡರು.
ಕ್ವಿಟ್ ಇಂಡಿಯಾ ದಿನಾಚರಣೆ, ಕೆಪಿಸಿಸಿ ಕಚೇರಿ. https://t.co/XRCHfk8Lxx
— Karnataka Congress (@INCKarnataka) August 9, 2022
ಈ ಕಾರ್ಯಕ್ರಮದಲ್ಲಿ ಮಾತನಾಡಿದಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತೆ. ಆಗ ಗಾಂಧೀಜಿಯವರನ್ನ ದಸ್ತಗಿರಿ ಮಾಡ್ತಾರೆ. ಬ್ರಿಟೀಷರು ಗಾಂಧೀಜಿಯವರನ್ನ ಅರೆಸ್ಟ್ ಮಾಡ್ತಾರೆ. ಈ ಚಳುವಳಿಯನ್ನ ನಾವು ಗಮನದಲ್ಲಿಡಬೇಕು ಎಂದರು.
ಬಿಜೆಪಿ, ಆರ್ ಎಸ್ ಎಸ್ ನವರು ಗುಲಾಮರು. ಬ್ರಿಟೀಷರ ಗುಲಾಮರಾಗಿದ್ದವರು ಅವರು. ಆರ್ ಎಸ್ ಎಸ್ 1925ರಲ್ಲೇ ಇತ್ತು. ಜನಸಂಘ ಬಂದಿದ್ದು 1969ರಲ್ಲಿ ಸ್ಥಾಪನೆಯಾಯಿತು. ಈಗ ಬಿಜೆಪಿಯಿಂದ ಹರ್ ಘರ್ ತಿರಂಗಾ ಅಂತ ಆಚರಿಸ್ತಿದ್ದಾರೆ. ಇದೇ ಗೋಲ್ವಾಲ್ಕರ್,ಸಾರ್ವರ್ಕರ್ ಧ್ವಜ ವಿರೋಧಿಸಿದ್ದರು. 52 ವರ್ಷ ಇವರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ನಾಗಪುರದ ಆರ್ ಎಸ್ ಎಸ್ ಕಚೇರಿ ಮೇಲೆ ಹಾರಿಸಿರಲಿಲ್ಲ ಎಂದು ಹೇಳಿದರು.
ನಾನು ಹಿಂದೆ ಸ್ಟೂಡೆಂಟ್ ಯೂನಿಯನ್ ನಲ್ಲಿದೆ. ಆಗಿನಿಂದಲೂ ಎಬಿವಿಪಿ ವಿರೋಧ ಮಾಡಿದ್ದೆ. ಆರ್ ಎಸ್ ಎಸ್ ಮೊದಲಿನಿಂದ ವಿರೋಧವಿದೆ. ಯಾಕಂದ್ರೆ ಅವು ಮೇಲ್ವರ್ಗದ ಸಂಘಟನೆಗಳು. ಚತುರ್ವರ್ಣ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟವರು. ಆ ವ್ಯವಸ್ಥೆ ಇದ್ದರೆ ಅಸಮಾನತೆ ಮುಂದುವರೆಯುತ್ತೆ. ಗುಲಾಮಗಿರಯೂ ಮುಂದುವರೆಯುತ್ತೆ. ಹಾಗಾಗಿ ಅಂದಿನಿಂದ ವಿರೋಧ ಮಾಡುತ್ತಲೇ ಬಂದಿದ್ದೇನೆ ಎಂದು ತಿಳಿಸಿದರು.
ಭಜರಂಗದಳ, ಹಿಂದೂ ಸಂಘಟನೆ ಎಲ್ಲ ಒಂದೇ ಗಿರಾಕಿಗಳು. ಸಮಾಜದಲ್ಲಿ ಅಸಮಾನತೆ ಇದ್ದರೆ ಜಾತಿವ್ಯವಸ್ಥೆ ಕಾರಣ. ಸಾವಿರಾರು ವರ್ಷ ಜಾತಿವ್ಯವಸ್ಥೆ ಇತ್ತು. ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಶೂದ್ರರಿಗೆ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಬಸವಣ್ಣನವರು ಬಂದ ನಂತರ ಅವಕಾಶ ಸಿಕ್ಕಿದ್ದು. ಇಂತ ವ್ಯವಸ್ಥೆ ಮೇಲೆ ಆರ್ ಎಸ್ಎಸ್ ನಂಬಿಕೆ ಇಟ್ಟಿದೆ. ರಾಷ್ಟ್ರಧ್ವಜ, ಸಂವಿಧಾನವನ್ನೇ ವಿರೋಧಿಸ್ತಾರೆ. ಇವರಿಗೆ ಇನ್ನೇಗೆ ದೇಶಪ್ರೇಮ ಬರಲು ಸಾಧ್ಯ. ಈಗ ನಾಟಕ ಆಡೋಕೆ ಶುರು ಮಾಡಿದ್ದಾರೆ. ಹರ್ ಘರ್ ತಿರಂಗಾ ಅಂತ ನಾಟಕ ಮಾಡ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದರು.