ಬೆಂಗಳೂರು : ಕೇಂದ್ರ ನೀತಿ ಆಯೋಗದ ಮಾದರಿಯಂತೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ಎಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
BIG NEWS: ‘ನಮ್ಮ ಮೆಟ್ರೋ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಆ.8ರಿಂದ ’15 ನಿಮಿಷ’ಕ್ಕೊಂದು ‘ರೈಲು ಸಂಚಾರ’
ನವ ಭಾರತಕ್ಕಾಗಿ ನವ ಕರ್ನಾಟಕವನ್ನು ನಿರ್ಮಿಸುವ ಉದ್ದೇಶದಿಂದ ರಚಿಸಲಾಗಿರುವ ಸಂಸ್ಥೆಗೆ ಸರ್ಕಾರದ ಯೋಜನೆ ಹಾಗೂ ಸಂಬಂಧಿಸಿದ ವಿಷಯಗಳಲ್ಲಿ ಪರಿಣಿತರಾದವರನ್ನು ಸರ್ಕಾರದಿಂದ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗುವುದು. ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲು ಹಾಗೂ ಗುರಿಗಳನ್ನು ಸಾಧಿಸಲು ವಾರ್ಷಿಕ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುವುದು. ಸಂಸ್ಥೆಯಲ್ಲಿ ಯೋಜನೆ, ಆರ್ಥಿಕ, ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ, ಶುದ್ಧ ಮತ್ತು ಹಸಿರು ಇಂಧನ ಮತ್ತು ಆರ್ಥಿಕತೆ ಮತ್ತು ಹಣಕಾಸು ವಲಯಗಳಾಗಿ ಒಟ್ಟು 8 ವಲಯ ಪರಿಣಿತರನ್ನು ಸಲಹೆಗಾರರನ್ನಾಗಿ ನೇಮಿಸಲಾಗುವುದು.
ವಿಭಾಗಗಳು
ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜಿಕ, ಆರೋಗ್ಯ ಮತ್ತು ಪೋಷಣೆ, ಶುದ್ಧ ಮತ್ತು ಹಸಿರು ಇಂಧನ ವಿಜ್ಞಾನ ಮತ್ತು ತಂತ್ರಜ್ಞಾನ , ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ, ಆರ್ಥಿಕತೆ ಮತ್ತು ಹಣಕಾಸು ವಿಭಾಗಗಳನ್ನು ರಚಿಸಲಾಗುವುದು.
‘ಪವಿತ್ರ ಗ್ರಂಥ’ ಕಂಠಪಾಠ ಮಾಡಿದ್ರೆ ಜೈಲು ಶಿಕ್ಷೆಯಿಂದ ವಿನಾಯ್ತಿ ; ‘ಪಾಕ್ ಪಂಜಾಬ್ ಸರ್ಕಾರ’ದಿಂದ ವಿಶಿಷ್ಟ ಪ್ರಸ್ತಾಪ
ವಿಷಯ ತಜ್ಞರು
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಲಹೆಗಾರರಾಗಿರುತ್ತಾರೆ. ಬಡತನ ನಿರ್ಮೂಲನೆ, ಅದಾಯ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಸೇವೆಗಳ ಸರಳೀಕರಣ, ಸ್ವಚ್ಛ ಮತ್ತು ಹಸಿರು ಇಂಧನ, ಸಂಪನ್ಮೂಲಗಳ ನಿರ್ವಹಣೆ, ಲಿಂಗ ಸಮಾನತೆ, ಕೈಗಾರಿಕೆ ಮತ್ತು ಮೂಲಸೌಕರ್ಯ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಗಳಿಗೆ ಎಂಟು ವಿಷಯ ತಜ್ಞರನ್ನು ನೇಮಿಸಲಾಗುವುದು.
ಪಾಲುದಾರ ಸಂಸ್ಥೆಗಳು
ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ.ಬಿ, ಐಸೆಕ್, ಎನ್.ಎಲ್.ಎಸ್.ಯು ಸೇರಿದಂತೆ 14 ಪ್ರಖ್ಯಾತ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಪಾಲುದಾರ ಸಂಸ್ಥೆಗಳಾಗಿ ನೇಮಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.