ಮೈಸೂರು: 2022ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ( Mysuru Dasara 2022 ) ಅಂಗವಾಗಿ ನಡೆಯಲಿರುವಂತ ಜಂಬೂಸವಾರಿಗೆ ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳು ನಾಡಿನ ಅದಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲಿದ್ದಾವೆ.
ದಂಸರಾ ಜಂಬೂಸವಾರಿ ಆನಂಗಳ ಪಟ್ಟಿ ಅಂತಿಮಗೊಂಡಂತೆ ಅಭಿಮನ್ಯು ನೇತವೃತ್ವದಲ್ಲಿ 4 ಹೆಣ್ಣಾನೆಗಳು ಸೇರಿದಂತೆ ಒಟ್ಟು 14 ಆನೆಗಳನ್ನು ಜಂಬೂಸವಾರಿಯಲ್ಲಿ ಪಾಲ್ಗೊಳ್ಳೋದಕ್ಕೆ ಅಂತಿಮಗೊಳಿಸಲಾಗಿದೆ.
ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಅಂದಹಾಗೇ ಅಭಿಮನ್ಯು ಜೊತೆಗೆ ಮೈಸೂರು ದಸರಾ ಮಹೋತ್ಸವ -2022ರ ಜಂಬೂಸವಾರಿಯಲ್ಲಿ ಮತ್ತಿಗೋಡು ಆನೆ ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷದ ಭೀಮ ಹಾಗೂ 38 ವರ್ಷದ ಮಹೇಂದ್ರ ಆನೆಯನ್ನು ಕರೆತರಲಾಗುತ್ತಿದೆ.
ಇನ್ನೂ ಬಳ್ಳೆ ಆನೆ ಶಿಭಿರದಿಂದ 63 ವರ್ಷದ ಅರ್ಜುನ, ದುಬಾರಿ ಆನೆ ಶಿಬಿರದಿಂದ 59 ವರ್ಷದ ವಿಕ್ರಮ, 45 ವರ್ಷದ ಕಾವೇರಿ, 44 ವರ್ಷದ ಧನಂಜಯ, 40 ವರ್ಷದ ಶ್ರೀರಾಮ, 41 ವರ್ಷದ ಗೋಪಿ, 63 ವರ್ಷದ ವಿಜಯಾ ಆನೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾವೆ.
BIG NEWS: ‘ಜೆಡಿಎಸ್’ನ ಮತ್ತೊಂದು ವಿಕೆಟ್ ಪತನ: ಅಗಿಲೆ ಯೋಗೀಶ್ ಎಎಪಿ ಸೇರ್ಪಡೆ
ಇವಲ್ಲದೇ ರಾಮಾಪುರ ಆನೆ ಶಿಬಿರದಿಂದ 49 ವರ್ಷದ ಚೈತ್ರಾ, 18 ವರ್ಷದ ಪಾರ್ಥರಾರಥಿ ಹಾಗೂ 21 ವರ್ಷದ ಲಕ್ಷ್ಮೀ ಸೇರಿದಂತೆ ಒಟ್ಟು 14 ಆನೆಗಳು ಜಂಬೂಸವಾರಿಯಲ್ಲಿ ಅಭಿಮನ್ಯು ನೇತೃತ್ವದಲ್ಲಿ ಸಾಗಲಿದ್ದಾವೆ.