ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ( Heavy Rain ) ಉಂಟಾಗಿರುವಂತ ಅತಿವೃಷ್ಠಿಯಿಂದ ಆಗಿರುವಂತ ಹಾನಿಗೆ ಪರಿಹಾರ ನೀಡೋದಕ್ಕಾಗಿ ಸರ್ಕಾರ 300 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ. ಈ ಮೂಲಕ ಮನೆಹಾನಿ ಸೇರಿದಂತೆ ವಿವಿಧ ಹಾನಿಗಳಿಗೆ ಶೀಘ್ರವೇ ಪರಿಹಾರ ನೀಡಲು ಸೂಚಿಸಿದೆ.
ಇಂದು ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸೋ ಸಂಬಂಧ 300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಎನ್ ಡಿ ಆರ್ ಎಫ್ ನಿಧಿಯಿಂದ 300 ಕೋಟಿ ರೂ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.
BREAKING NEWS: ರಾಜ್ಯದಲ್ಲಿ ಜೂ.1ರಿಂದ ಆ.4ರವರೆಗೆ ಮಳೆಯಿಂದ 64 ಜನರು ಸಾವು – ಸಚಿವ ಆರ್ ಅಶೋಕ್
ಅಂದಹಾಗೇ ವರುಣನ ಆರ್ಭಟದಿಂದ ಉಂಟಾಗಿರುವಂತ ಹಾನಿಗೆ ಈ ಪರಿಹಾರದ ಹಣವನ್ನು ಬಳಕೆ ಮಾಡಲಾಗುತ್ತದೆ. ಇತ್ತೀಚಿಗೆ ರಾಜ್ಯ ಸರ್ಕಾರ ನೆರೆ ಪರಿಹಾರದ ಮೊತ್ತವನ್ನು ಕೂಡ ಪರಿಷ್ಕರಿಸಿದ್ದು, ಅದರಂತೆ ಪರಿಹಾರ ವಿತರಣೆಯಾಗಲಿದೆ.
BIGG NEWS : ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ; ತನಿಖೆಯಲ್ಲಿ ದೋಷ ಕಂಡುಬಂದರೆ ಕಾರ್ಡ್ ರದ್ದು
ಹೀಗಿದೆ ನೂತನ ಪರಿಷ್ಕೃತ ರಾಜ್ಯ ಸರ್ಕಾರದ ನೆರೆ ಪರಿಹಾರದ ಹಣದ ಮೊತ್ತ
- ಮಾನವ ಜೀವ ಹಾನಿ – 4 ಲಕ್ಷವನ್ನು 5 ಲಕ್ಷಕ್ಕೆ ಹೆಚ್ಚಿಸಿದೆ.
- ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು, ಬಟ್ಟೆ-ಬರೆ ಹಾನಿ – ರೂ.6,200ರಿಂದ ರೂ.10,000ಕ್ಕೆ ಹೆಚ್ಚಳ
- ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆಹಾನಿ – ರೂ.4,04,900 ಹಣವನ್ನು ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಶೇ.25ರಿಂದ ಶೇ.75ರಷ್ಟು ತೀವ್ರ ಮನೆ ಹಾನಿ ( ಕೆಡವಿ ಹೊಸದಾಗಿ ನಿರ್ಮಿಸುವುದು) – ರೂ.4,04,900 ರಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.
- ಶೇ.25ರಿಂದ ಶೇ.75ರಷಅಟು ತೀವ್ರ ಮನೆ ಹಾನಿ (ದುರಸ್ತಿ) – ರೂ.2,04,900ರಿಂದ ರೂ.3,00,000ಕ್ಕೆ ಹೆಚ್ಚಿಸಿದೆ.
- ಶೇ.15-25ರಷ್ಟು ಭಾಗಶಹ ಮನೆ ಹಾನಿ – ರೂ.44,800ರಿಂದ ರೂ.50,000ರಕ್ಕೆ ಹೆಚ್ಚಿಸಿದೆ.
ಈ ಮೇಲ್ಕಂತ ಪರಿಷ್ಕೃತ ದರದಂತೆ, ಜಿಲ್ಲಾಧಿಕಾರಿಗಳು ಸರ್ಕಾರ ಬಿಡುಗಡೆ ಮಾಡಿರುವಂತ 300 ಕೋಟಿ ಅನುದಾನದ ಹಣದಲ್ಲಿ, ಅತಿವೃಷ್ಟಿ, ಪ್ರವಾಹದಿಂದ ಮನೆಹಾನಿ ಹಾಗೂ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವಂತಹ ನೆರೆ ಸಂತ್ರಸ್ಥರಿಗೆ ಪರಿಹಾರವನ್ನು ವಿತರಿಸಲಿದ್ದಾರೆ.