ಹಾಸನ: ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಲು ಮುಂದಾಗಿದೆ. ರಾಜ್ಯದ ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದಂತವರಿಗೆ ಶೀಘ್ರವೇ ಹೊಸ ಯೋಜನೆ ಘೋಷಣೆ ಮಾಡಲಿದೆ. ಈ ಮೂಲಕ ಭಾರೀ ಮಳೆಯಿಂದಾಗಿ ಸಂತ್ರಸ್ತರಾದಂತ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಲಿದೆ.
BREAKING NEWS: ಭಾರೀ ಮಳೆ ಹಿನ್ನಲೆ: ಚಾಮರಾಜನಗರ ಜಿಲ್ಲೆಯಾಧ್ಯಂತ ನಾಳೆ ನಾಡಿದ್ದು ಶಾಲೆಗಳಿಗೆ ರಜೆ ಘೋಷಣೆ
ಈ ಕುರಿತಂತೆ ಇಂದು ಹಾಸನದ ಶ್ರವಣಬೆಳಗೋಳದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಕಂದಾಯ ಸಚಿವ ಆರ್ ಅಶೋಕ್, ನೆರೆ ಸಂತ್ರಸ್ತರೊಂದಿಗೆ ಸರ್ಕಾರವಿದೆ. ಯಾರೂ ಆತಂಕ ಪಡಬಾರದು ಎಂಬುದಾಗಿ ಭರವಸೆ ನೀಡಿದರು.
ಇನ್ನೂ ರಾಜ್ಯದಲ್ಲಿ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾದಂತ ಜನರಿಗಾಗಿ 64 ಕಡೆಗಳಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ನೆರೆ ಸಂತ್ರಸ್ತರಿದಾಗಿ 3-4 ದಿನಗಳಲ್ಲಿ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಮನೆಗೆ ನೀರು ನುಗಿದ್ರೇ 10 ಸಾವಿರ ಪರಿಹಾರ ನೀಡಲಾಗುತ್ತದೆ. ಜೊತೆಗೆ 15 ದಿನಗಳಿಗೆ ಆಗುವಷ್ಟು ಆಹಾರ ಸಾಮಗ್ರಿಯನ್ನು ಕೊಡುತ್ತೇವೆ ಎಂದು ಹೇಳಿದರು.
ನೆರೆ ಸಂತ್ರಸ್ತರಿದಾಗಿ ಹೊಸ ಯೋಜನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ 3-4 ದಿನಗಳಲ್ಲಿ ಚರ್ಚಿಸಿ, ಘೋಷಣೆ ಮಾಡಲಾಗುತ್ತದೆ ಎಂದರು.
ಮಳೆಹಾನಿ ಪರಿಹಾರದ ಹಣವನ್ನು ಡಬಲ್ ಮಾಡಿದ್ದೇವೆ. ಒಂದು ತಿಂಗಳೊಳಗೆ ಪರಿಹಾರದ ಹಣ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ನೊಂದವರ ಜೊತೆಗಿದೆ. ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಸಿಕೊಡಲಾಗುತ್ತದೆ ಎಂದು ತಿಳಿಸಿದರು.