ನವದೆಹಲಿ: ಪತ್ರಾ ಚಾಲ್ ಭೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ವರ್ಷಾ ರಾವತ್ ಅವರ ಖಾತೆಯಲ್ಲಿ ನಡೆದ ವ್ಯವಹಾರಗಳು ಬೆಳಕಿಗೆ ಬಂದ ನಂತರ ಸಮನ್ಸ್ ಜಾರಿಗೊಳಿಸಿದೆ.
ಶಿವಮೊಗ್ಗ: ದ್ವಿತೀಯ ಪಿಯು ಪೂರಕ ಪರೀಕ್ಷೆ ಹಿನ್ನಲೆ: ಪರೀಕ್ಷಾ ಕೇಂದ್ರದ ಸುತ್ತ-ಮುತ್ತ ನಿಷೇಧಾಜ್ಞೆ ಜಾರಿ
ಈಗಾಗಲೇ ಪತ್ರಾ ಚಾಲ್ ಭೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಅವರಿಗೆ ಇಂದು ಇಡಿ ಕಸ್ಟಡಿಯನ್ನು ಆಗಸ್ಟ್ 8ರವರೆಗೆ ಕೋರ್ಟ್ ವಿಸ್ತರಿಸಿ ಆದೇಶಿಸಿತ್ತು.
BIG BREAKING NEWS: ಕರ್ನಾಟಕದಲ್ಲಿ ಆರ್ ಎಂಡ್ ಡಿ ನೀತಿಗೆ ಅನುಮೋದನೆ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಈ ಬೆನ್ನಲ್ಲೇ, ಇಂದು ಪತ್ರಾ ಚಾಲ್ ಭೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿಯೇ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಗೂ ಇಡಿ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಿದೆ.
ED summons Sanjay Raut's wife Varsha Raut in the Patra Chawl land case money laundering case. Summons issued after transactions done on Varsha Raut's account came to light: ED pic.twitter.com/8cUyE7Bcao
— ANI (@ANI) August 4, 2022