ಬೆಂಗಳೂರು: ಬಿಎಂಟಿಸಿಯಿಂದ ( BMTC ) 45 ವರ್ಷ ಮೇಲ್ಪಟ್ಟ ಅಧಿಕಾರಿ, ನೌಕರರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ( Jayadeva Hospital ) ಹೃದಯ ತಪಾಸಣೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಹೃದಯ ರೋಗದಿಂದ ಬಳಲುತ್ತಿದ್ದಂತ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.
ಭೋವಿ ಕುಲಕಸುಬಿಗೆ ವಿಶೇಷ ಅವಕಾಶ ಹಾಗೂ ರಿಯಾಯ್ತಿ ತರಲು ವ್ಯವಸ್ಥೆ – ಸಿಎಂ ಬಸವರಾಜ ಬೊಮ್ಮಾಯಿ
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ನೀಡಿದ್ದು, ಸಂಸ್ಥೆಯು ಅಧಿಕಾರಿಗಳು, ನೌಕರರ ಆರೋಗ್ಯದ ಅನುಕೂಲಕ್ಕಾಗಿ ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋದಗದಲ್ಲಿ ಆರೋಗ್ಯ ತಪಾಸಣೆ ( Health Checkup ) ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ನೌಕರರ ಆರೋಗ್ಯದ ಹಿತದೃಷ್ಠಿಯಿಂದ, ಇದೀಗ ಮುಂದುವರೆದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬಿಎಂಟಿಸಿಯ 45 ವರ್ಷ ಮೇಲ್ಪಟ್ಟ ನೌಕರರು, ಅಧಿಕಾರಿಗಳಿಗೆ ಹೃದಯರೋಗ ತಪಾಸಣಾ ಪರೀಕ್ಷೆಗಳನ್ನು ಮಾಡಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.
BIG NEWS: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಗೆ ಚಕ್ರವರ್ತಿ ಸೂಲಿಬೆಲೆ ಅಪಮಾನ: ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್
ಈ ಹಿನ್ನಲೆಯಲ್ಲಿ ಇನ್ಮುಂದೆ ಬಿಎಂಟಿಸಿಯ 45 ವರ್ಷ ಮೇಲ್ಪಟ್ಟ ನೌಕರರಿಗೆ ಹೃದ್ರೋಗ ಸಮಸ್ಯೆ ಉಂಟಾದಲ್ಲಿ, ತೊಂದರೆ ಆದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿದೆ. ಇದರಿಂದಾಗಿ 10,744 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಸಂಸ್ಥೆಯು ಸುಮಾರು ರೂ.1.30 ಕೋಟಿಗಳನ್ನು ಭರಿಸಲಿದೆ.