ತ್ರಿಶೂರ್: ಕೇರಳದ ತ್ರಿಶೂರ್ ನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳನ್ನು ತೋರಿಸಿದ ಯುವಕನೊಬ್ಬ ಸಾವನ್ನಪ್ಪಿದ ಒಂದು ದಿನದ ನಂತರ ಭಾರತವು ಸೋಮವಾರ ತನ್ನ ಮೊದಲ ಮಂಕಿಪಾಕ್ಸ್ ಸಾವನ್ನು ದೃಢಪಡಿಸಿದೆ.
BIG NEWS: ರಾಜ್ಯ ಕಾಂಗ್ರೆಸ್ ನಿಂದ ಚುನಾವಣೆಗೆ ಭರ್ಜರಿ ತಯಾರಿ: ಚುನಾವಣಾ ಪ್ರಣಾಳಿಕೆ ರಚನೆಗೆ ಕಮಿಟಿ ರಚನೆ
ಈ ವ್ಯಕ್ತಿಯು ಸುಮಾರು 10 ದಿನಗಳ ಹಿಂದೆ ಯುಎಇಯಲ್ಲಿ ಪಾಸಿಟಿವ್ ಎಂದು ಪರೀಕ್ಷಿಸಲ್ಪಟ್ಟಿದ್ದಾನೆ. ಆದರೆ ಅದನ್ನು ಕೇರಳದಲ್ಲಿ ತನ್ನನ್ನು ಉಪಚರಿಸಿದ ವೈದ್ಯರಿಗೆ ಬಹಿರಂಗಪಡಿಸಿಲ್ಲ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತನಿಖೆಗಾಗಿ ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ – ಸಿಎಂ ಬೊಮ್ಮಾಯಿ
ಇನ್ನೂ 22 ವರ್ಷದ ಯುವಕನ ಮಾದರಿಯನ್ನು ಮಹಾರಾಷ್ಟ್ರದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯ ವೇಳೆಯಲ್ಲಿ ಮೃತ ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿರೋದು ಖಚಿತವಡಿಸಿದೆ. ಹೀಗಾಗಿ ಮಂಕಿಪಾಕ್ಸ್ ಸೋಂಕಿನಿಂದ ಕೇರಳದಲ್ಲಿ 22 ವರ್ಷದ ವ್ಯಕ್ತಿ ಮೃತಪಟ್ಟಿರೋದು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿಯೇ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಿದೆ.