ಗೋವಾ: ಗೋವಾದ ಕೊರ್ಟಾಲಿಮ್ ಗ್ರಾಮದ ಜುವಾರಿ ಸೇತುವೆಯ ರೇಲಿಂಗ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರಿದ್ದ ಕಾರು ನದಿಗೆ ಉರುಳಿದೆ. ಸ್ಥಳೀಯರ ಮಾಹಿತಿ ಮೇರೆಗೆ ಬಂದ ಪೊಲೀಸರು ಕಾರನ್ನು ಪತ್ತೆ ಮಾಡಲು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇಂದು ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸರು ಸ್ಥಳೀಯರೊಂದಿಗೆ ಕಾರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
#ZuariAccidentUpdate|| This was the scene last night on #Zuari Bridge after the SUV plunged in River. This video is shot by one of the person who crossed the bridge last night. pic.twitter.com/UQmm3F1sGK
— Goa News Hub (@goanewshub) July 28, 2022
ಘಟನೆಯ ಬಗ್ಗೆ ಸ್ಥಳೀಯರಿಂದ ಮಧ್ಯರಾತ್ರಿ 1.10ಕ್ಕೆ ಕರೆ ಬಂದಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಯ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ. ಅತಿವೇಗದಿಂದ ಓಡಿಸಿದ ಎಸ್ಯುವಿ ಸೇತುವೆಯ ಮೇಲೆ ಮತ್ತೊಂದು ವಾಹನವನ್ನು ಹಿಂದಿಕ್ಕಿ ರೈಲಿಂಗ್ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ್ದಾರೆ. ಕಾರಿನಲ್ಲಿ ಕನಿಷ್ಠ ನಾಲ್ಕು ಮಂದಿ ಇದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Health tips: ‘ಮಳೆಗಾಲ’ದಲ್ಲಿ ಕಾಡುವ ಜ್ವರ, ಶೀತಕ್ಕೆ ಯಾವ ಬಗೆಯ ‘ಚಹಾ’ ಪರಿಣಾಮಕಾರಿ? ಇಲ್ಲಿದೆ ಮಾಹಿತಿ