ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅವರು, ʻನಾನು ಚೆಸ್ಅನ್ನು ತುಂಬಾ ಪ್ರೀತಿಸುತ್ತೇನೆʼ ಎಂದು ಹೇಳಿಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ 44 ನೇ ಚೆಸ್ ಒಲಿಂಪಿಯಾಡ್(44th Chess Olympiad) ಅನ್ನು ತಮಿಳುನಾಡು ಆಯೋಜಿಸಲು ಸಜ್ಜಾಗಿದೆ. ಅಲ್ಲಿ ಭಾಗವಹಿಸುವ ಚೆಸ್ ಆಟಗಾರರಿಗೆ ರಜನಿಕಾಂತ್ ಶುಭಹಾರೈಸಿದ್ದಾರೆ.
ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ, #ChessOlympiad2022 ಹ್ಯಾಶ್ಟ್ಯಾಗ್ ಬಳಸಿ, ರಜನಿಕಾಂತ್ , “ನಾನು ಅತ್ಯಂತ ಇಷ್ಟಪಡುವ ಒಳಾಂಗಣ ಆಟ ಚೆಸ್ ಆಗಿದೆ. 44 ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾಗವಹಿಸುವ ಎಲ್ಲಾ ಚೆಸ್ ಮನಸ್ಸುಗಳಿಗೆ ಶುಭ ಹಾರೈಸುತ್ತೇನೆ… ದೇವರು ಆಶೀರ್ವದಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.
#ChessOlympiad2022 An indoor game I love the most … wishing all the chess minds the very best .. god bless. pic.twitter.com/nVZ8SU51va
— Rajinikanth (@rajinikanth) July 28, 2022
ರಜನಿಕಾಂತ್ ಅವರು ಚೆಸ್ ಆಡುತ್ತಿರುವ ಮತ್ತು ಚಿಂತನಶೀಲ ಮನಸ್ಥಿತಿಯಲ್ಲಿ ಕಾಣಿಸಿಕೊಂಡಿರುವ ದಿನಾಂಕವಿಲ್ಲದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
44ನೇ ಚೆಸ್ ಒಲಿಂಪಿಯಾಡ್ ಇಂದಿನಿಂದ (ಜುಲೈ 28 ರಿಂದ) ಆಗಸ್ಟ್ 10 ರವರೆಗೆ ಚೆನ್ನೈನಿಂದ ಸುಮಾರು 50 ಕಿಮೀ ದೂರದಲ್ಲಿರುವ ಮಾಮಲ್ಲಪುರಂನಲ್ಲಿ ನಡೆಯಲಿದೆ.
Rain In Karnataka : ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ