ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಸಾಲ ಪಡೆದ ರೈತರಿಗೆ ವಿಮೆಗೆ ಒಳಪಡಿಸುವುದು ಕಡ್ಡಾಯವಾಗಿದೆ.
ಕೆಂಪು ಮೆಣಸಿನಕಾಯಿ, ಸಜ್ಜೆ (ನೀರಾವರಿ), ತೊಗರಿ (ನೀ, ಮ.ಆ), ಸೂರ್ಯಕಾಂತಿ (ಮ.ಆ), ಸಜ್ಜೆ (ನೀ, ಮ.ಆ), ಎಳ್ಳು (ಮ.ಆ), ನೆಲಗಡಲೆ (ನೀ, ಮ.ಆ), ಜೋಳ (ಮ.ಆ), ಹುರುಳಿ ( ಮ.ಆ), ಅರಿಶಿಣ, ಮುಸುಕಿನ ಜೋಳ (ಮ.ಆ, ನೀ) ಬೆಳೆಗಳಿಗೆ ವಿಮೆ ಕಂತು ಪಾವತಿಗೆ ಜುಲೈ 31 ಕೊನೆಯದಿನವಾದರೆ, ಕೆಂಪು ಮೆಣಸಿನಕಾಯಿ (ಮ.ಆ), ಸೂರ್ಯಕಾಂತಿ (ನೀರಾವರಿ), ಈರುಳ್ಳಿ (ನೀ, ಮ.ಆ) ಬೆಳೆಗಳಿಗೆ ಆಗಸ್ಟ 16 ಆಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
BREAKING: ವೇಶ್ಯಾವಾಟಿಕೆ ನಡೆಸುತ್ತಿದ್ದ ಮೇಘಾಲಯ ಬಿಜೆಪಿ ನಾಯಕನ ಬಂಧನ | Meghalaya BJP Leader