ಮಂಡ್ಯ: ಜಿಲ್ಲೆಯ ರೈತರ ಜೀವನಾಡಿಯಾಗಿರುವಂಕ ಕೆ ಆರ್ ಎಸ್ ಅಣೆಕಟ್ಟೆಯ ( KRS Dam ) ಸುತ್ತಾಮುತ್ತಲಿನ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ನಡೆಸಲಾಗುತ್ತಿರುವಂತ ಬ್ಲಾಸ್ಟ್ ನಿಂದ ಅಪಾಯ ಎದುರಾಗಿದೆ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಜುಲೈ.25ರ ಇಂದಿನಿಂದ ಜುಲೈ.31ರವರೆಗೆ ಜಿಲ್ಲಾಡಳಿತದಿಂದ ಟ್ರಯಲ್ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ.
ಹೌದು.. ಕಲ್ಲು ಗಣಿಗಾರಿಕೆಯಿಂದ KRS ಡ್ಯಾಂ ಗೆ ಅಪಾಯ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಜಿಲ್ಲಾಡಳಿತದಿಂದ ದಿನಾಂಕ ಫೀಕ್ಸ್ ಮಾಡಿದೆ. ಅದರಂತೆ ಜು-25ರ ಇಂದಿನಿಂದ ಜು-31ರವರೆಗೆ ಟ್ರಯಲ್ ಬ್ಲಾಸ್ಟಿಂಗ್ ನಡೆಸಲಿದೆ.
ನನ್ನ ಬಾಯಿ ಮುಚ್ಚಿಸೋಕೆ ಯಾರಿಂದಲೂ ಸಾಧ್ಯವಿಲ್ಲ: ಡಿಕೆಶಿಗೆ ಜಮೀರ್ ಸಡ್ಡು
ಪ್ರಾಕೃತಿಕ ವಿಕೋಪ ಇಲಾಖೆಯಿಂದ ನೀಡಿದ್ದಂತ ಎಚ್ಚರಿಕೆ ಹಿನ್ನಲೆಯಲ್ಲಿ KRS ಡ್ಯಾಂ ವ್ಯಾಪ್ತಿಯ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ಟ್ರಯಲ್ ನಡೆಯಲಾಗುತ್ತದೆ. ಇಲಾಖೆಯ ವರದಿ ಆಧರಿಸಿ KRS ಸುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತದಿಂದ ಗಣಿಗಾರಿಕೆ ನಿರ್ಬಂಧವನ್ನು ವಿಧಿಸೋ ತೀರ್ಮಾನಕ್ಕೂ ಮುಂದೆ ಬರಲಿದೆ ಎನ್ನಲಾಗುತ್ತಿದೆ.
ಆದ್ರೇ.. ವೈಜ್ಞಾನಿಕ ವರದಿ ಇಲ್ಲದೆ ಗಣಿಗಾರಿಕೆ ನಿರ್ಬಂಧಿಸಿದ್ದಕ್ಕೆ ಗಣಿ ಮಾಲೀಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇದೇ ಕಾರಣದಿಂದಾಗಿ ಸರ್ಕಾರಕ್ಕೆ ಜಿಲ್ಲಾಡಳಿತ ಮನವಿ ಕೂಡ ಮಾಡಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಪುಣೆಯ ವಿಜ್ಞಾನಿಗಳ ತಂಡದಿಂದ ಟ್ರಯಲ್ ಬ್ಲಾಸ್ಟ್ ನಡೆಸೋದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಅ.2ರಂದು ‘ಯಶಸ್ವಿನಿ ಯೋಜನೆ’ ಮರುಜಾರಿ
ಈ ಹಿಂದೆಯೇ ಟ್ರಯಲ್ ಬ್ಲಾಸ್ಟ್ ಗೆ ಅನುಮತಿ ನೀಡಿದ್ರು ತಾಂತ್ರಿಕ ಮತ್ತು ಕೋವಿಡ್ ಕಾರಣದಿಂದ ಟ್ರಯಲ್ ಬ್ಲಾಸ್ಟಿಂಗ್ ವಿಳಂಬಗೊಂಡಿತ್ತು. ಇದೀಗ ಇಂದಿನಿಂದ ಟ್ರಯಲ್ ಬ್ಲಾಸ್ಟಿಂಗ್ ಆರಂಭಿಸಲಿದೆ. ಈ ವರದಿಯ ಮೇಲೆ ಕೆ ಆರ್ ಎಸ್ ಸುತ್ತಮುತ್ತಲಿನ ಕಲ್ಲುಗಣಿಗಾರಿಕೆಯ ಭವಿಷ್ಯವನ್ನು ಜಿಲ್ಲಾಡಳಿತ ನಿರ್ಧರಿಸಲಿದೆ.
ವರದಿ: ಗಿರೀಶ್ ರಾಜ್, ಮಂಡ್ಯ