ಬಾಗಲಕೋಟೆ: ಆತ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದ. ಇದೇ ಸಿಟ್ಟಿನಲ್ಲಿ ತಾನು ಸಾಯುತ್ತೇನೆ ಎಂಬುದಾಗಿ ಓಡೋಡಿ ಹೋಗಿದ್ದನು. ಮನೆಯ ಸಮೀಪವೇ ಇದ್ದಂತ ನದಿಗೆ ಹಾರಿದ್ದಾನೆ. ಆದ್ರೇ ಅದೃಷ್ಟ ಚೆನ್ನಾಗಿತ್ತು. ಅದೇನ್ ಆಯ್ತು ಅಂತ ಮುಂದೆ ಓದಿ..
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ಚನ್ನಬಸಪ್ಪ ಎಂಬಾತ ಪತ್ನಿಯ ಜೊತೆಗೆ ಜಗಳ ಮಾಡಿಕೊಂಡಿದ್ದನು. ಇದೇ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ತೆರಳಿದ್ದರು.
ಮನೆಯಿಂದ ಓಡೋಡಿ ಬಂದಂತ ಚನ್ನಬಸಪ್ಪ ಬೀಳಗಿ ತಾಲೂಕಿನ ಅನಗವಾಡಿ ಬಳಿಯ ಘಟಪ್ರಭಾ ಸೇತುವೆ ಮೇಲಿನಿಂದ ನದಿಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕಾಗಿ ಹಾರಿದ್ದನು. ಇದನ್ನು ಗಮನಿಸಿದಂತ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಂತ ಚನ್ನಬಸಪ್ಪನನ್ನು ರಕ್ಷಿಸಿದ್ದಾರೆ.