ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ ಹೆಚ್ ಡಿ ಫೆಲೋಶಿಫ್ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶಾಸಕ ಶ್ರೀನಿವಾಸಗೌಡ ಗೆದ್ರೇ.. ನಾ ಅವರ ಮನೆ ಮುಂದೆ ವಾಚ್ ಮೆನ್ ಆಗುವೆ – MLC ಗೋವಿಂದರಾಜು ಸವಾಲ್
ಈ ಬಗ್ಗೆ ಅಲ್ಪಸಂಖ್ಯಾತ ನಿರ್ದೇಶನಲಾಯದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22 ಮತ್ತು 2022-23ನೇ ವರ್ಷದ ಅವಧಿಯಲ್ಲಿ ಎಂ ಫಿಲ್ ಮತ್ತು ಪಿ ಹೆಚ್ ಡಿಗೆ ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳು ಮಾತ್ರ ಫೆಲೋಶಿಫ್ ಗೆ ಅರ್ಹರಾಗಿರುವವರು ಎಂದು ಹೇಳಿದೆ.
BREAKING NEWS: ವಾಹನಗಳ ಮೇಲೆ ‘ನಾಮಫಲಕ’ ನಿಷೇಧಿಸಿ ‘ಬಿಬಿಎಂಪಿ ಆದೇಶ’
ಎಂ.ಫಿಲ್, ಪಿ.ಹೆಚ್ ಡಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು
- ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕು. ಜೈನ, ಪಾರ್ಸಿ, ಬೌದ್ಧ, ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದವರಾಗಿರಬೇಕು.
- ಪೂರ್ಣಾವಧಿಯ ಕೋರ್ಸ್ ಗೆ ನೊಂದಣಿಯಾಗಿರಬೇಕು.
- ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಹೆಚ್ಚಿರಬಾರದು.
- 35 ವರ್ಷ ಗರಿಷ್ಠ ವಯೋಮಿತಿ ಕಡ್ಡಾಯ
ಅರ್ಜಿ ಸಲ್ಲಿಕೆಯ ಬಗ್ಗೆ ಮುಖ್ಯ ಮಾಹಿತಿ
- ಅರ್ಹ ವಿದ್ಯಾರ್ಥಿಗಳು https://sevsindhuservices.karnataka.gov.in ಜಾಲತಾಣಕ್ಕೆ ಭೇಟಿಯಾಗಿ ಅರ್ಜಿಯನ್ನು ಸಲ್ಲಿಸುವುದು
- ಅರ್ಜಿಯ ಕಾಗಗದ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬೇಕು.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 8277799990ಗೆ ಸಂಪರ್ಕಿಸಿ
Tech Kannada: ‘ಗೂಗಲ್ ಮೀಟ್’ ಈಗ ‘ಯೂಟ್ಯೂಬ್’ನಲ್ಲಿ ಲೈವ್ ಮಾಡಬಹುದು.! ಆ ಬಗ್ಗೆ ಇಲ್ಲಿದೆ ಮಾಹಿತಿ | Google Meet