ಕೋಲಾರ: ಜಿಲ್ಲೆಯಲ್ಲಿ ಶಾಸಕ ಶ್ರೀನಿವಾಸಗೌಡ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ನಡುವೆ ಟಾಕ್ ಫೈಟ್ ಜೋರಾಗಿದೆ. ಒಂದು ವೇಳೆ ಕಾಂಗ್ರೆಸ್ ನಿಂದ ಕೋಲಾರದಲ್ಲಿ ಮುಂಬರುವ ಚುನಾವಣೆಗೆ ನಿಂತು ಗೆದ್ದಿದ್ದೇ ಆದ್ರೇ… ತಾನು ಅವರ ಮನೆಯ ಮುಂದೆ ವಾಚ್ ಮ್ಯಾನ್ ಆಗಿ ಕೆಲಸ ಮಾಡೋದಾಗಿ ಸವಾಲ್ ಹಾಕಿದ್ದಾರೆ.
ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರಷ್ಟೇ, ರಾಜಕೀಯದಿಂದ ನಿವೃತ್ತಿಯಲ್ಲ – ಎಸ್ಎಂ ಕೃಷ್ಣ
ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಪರಿಷತ್ ಸದಸ್ಯ ಗೋವಿಂದರಾಜು ಅವರು, ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ನಿಂದ ಕೋಲಾರದಲ್ಲಿ ಟಿಕೆಟ್ ಸಿಗಲಿದೆ. ಹೀಗಾಗಿಯೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಅದು ಅವರ ಭ್ರಮೆಯಾಗಿದೆ ಎಂದರು.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದರ ಹಿಂದಿನ ಸ್ಪಷ್ಟ ಕಾರಣವೇನು.? ಬಿಜೆಪಿಗೆ ರಮೇಶ್ ಬಾಬು ಪ್ರಶ್ನೆ
ಕೋಲಾರದಲ್ಲಿ ಮುಂಬರುವಂತ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂತ ಟಿಕೆಟ್ ಪಡೆದು, ಚುನಾವಣೆಗೆ ನಿಲ್ಲೋದು ಅಷ್ಟು ಸುಲಭವಲ್ಲ. ಅವರು ಕಾರ್ಯಕರ್ತರು ಸೇರಿದಂತೆ ವಿವಿಧ ಮುಖಂಡರನ್ನು ಹೊತ್ತು ಸಾಗೋದು ಅಷ್ಟು ಸುಲಭದ ಮಾತು ಅಲ್ಲ. ಒಂದು ವೇಳೆ ಅವರು ಟಿಕೆಟ್ ಪಡೆದು, 2023ರ ಚುನಾವಣೆಯಲ್ಲಿ ಕೋಲಾರದಿಂದ ನಿಂತು, ಶಾಸಕರಾಗಿ ಆಯ್ಕೆಯಾಗಿದ್ದೇ ಆದ್ರೇ.. ನಾನು ಅವರ ಮನೆಯ ಮುಂದೆ ವಾಚ್ ಮ್ಯಾನ್ ಆಗುವೆ ಎಂಬುದಾಗಿ ಮತ್ತೊಮ್ಮೆ ನಿಮ್ಮೆಲ್ಲರ ಮುಂದೆ ಘೋಷಿಸುತ್ತೇನೆ ಎಂದು ಹೇಳಿದರು.
Tech Kannada: ‘ಗೂಗಲ್ ಮೀಟ್’ ಈಗ ‘ಯೂಟ್ಯೂಬ್’ನಲ್ಲಿ ಲೈವ್ ಮಾಡಬಹುದು.! ಆ ಬಗ್ಗೆ ಇಲ್ಲಿದೆ ಮಾಹಿತಿ | Google Meet