ಕೆಎನ್ಎನ್ಡಿಜಿಟಲ್ ಡೆಸ್ಕ್ : ಅತ್ಯಾಚಾರ ಮತ್ತು ಮಗುವಿನ ಜನನದ ನಂತ್ರ ಅಪ್ರಾಪ್ತ ವಯಸ್ಕಳನ್ನ ಮದುವೆಯಾಗುವ ಆಧಾರದ ಮೇಲೆ ಅಪರಾಧದ ಗಂಭೀರತೆ ಕಡಿಮೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಂತಹ ಸಂದರ್ಭದಲ್ಲಿ, ಅಪ್ರಾಪ್ತ ವಯಸ್ಕಳ ಸಮ್ಮತಿಯು ಅರ್ಥಪೂರ್ಣವಾಗಿರುವುದಿಲ್ಲ, ಹಾಗಾಗಿ ಕಾನೂನಿನ ಅಡಿಯಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರೋದಿಲ್ಲ. ಆರೋಪಿಗಳ ಜಾಮೀನು ಅರ್ಜಿಯನ್ನ ತಿರಸ್ಕರಿಸುವಾಗ ನ್ಯಾಯಾಲಯವು ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟಾ ಅವ್ರು ತಮ್ಮ ತೀರ್ಪಿನಲ್ಲಿ, “ಅಪ್ರಾಪ್ತ ವಯಸ್ಕರು ಲೈಂಗಿಕ ಸಂಬಂಧದ ಆಮಿಷಕ್ಕೆ ಒಳಗಾದ ನಂತ್ರ ಅವರ ಒಪ್ಪಿಗೆಯ ಹಕ್ಕನ್ನ ನಿಯಮಿತವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು. ಯಾಕಂದ್ರೆ, ಅತ್ಯಾಚಾರದ ಬಲಿಪಶುವಿನ ವಿರುದ್ಧದ ಅಪರಾಧ ಮಾತ್ರವಲ್ಲ, ಸಮಾಜದ ವಿರುದ್ಧವೂ ಆಗಿದೆ ಎಂದರು.
ಸೆಕ್ಷನ್ 363, 366 ಮತ್ತು 376 ರ ಅಡಿಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ಎಫ್ಐಆರ್ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳನ್ನು ಅಪಹರಿಸಿದ್ದಾನೆ ಎಂದು ಅದು ಆರೋಪಿಸಿದೆ. ಜುಲೈ 2019ರಿಂದ ಬಾಲಕಿ ಕಾಣೆಯಾಗಿದ್ದಳು. ನಂತ್ರ ಮೊಬೈಲ್ನ ತಾಂತ್ರಿಕ ಮೇಲ್ವಿಚಾರಣೆಯ ಮೇಲೆ ಅಕ್ಟೋಬರ್ 5, 2021ರಂದು ಎಂಟು ತಿಂಗಳ ಮಗುವಿನೊಂದಿಗೆ ಆಕೆಯನ್ನ ವಶಪಡಿಸಿಕೊಳ್ಳಲಾಗಿದೆ.
ಲೈಂಗಿಕ ಶೋಷಣೆ ಘೋರ ಅಪರಾಧ
ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಘೋರ ಅಪರಾಧ ಎಂದು ನ್ಯಾಯಾಲಯ ಹೇಳಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಅಪ್ರಾಪ್ತ ವಯಸ್ಕ ಹೆಂಡತಿಯೊಂದಿಗೆ ಸಹಮತದಿಂದ ಲೈಂಗಿಕ ಸಂಬಂಧವನ್ನ ಹೊಂದಿದ್ರೂ ಸಹ, ಅಪ್ರಾಪ್ತ ವಯಸ್ಕರೊಂದಿಗೆ ಸಂಭೋಗ ನಡೆಸುವುದನ್ನ ಕಾನೂನು ನಿಷೇಧಿಸುತ್ತದೆ ಎಂದು ಹೇಳಿದರು. ಸಹಮತದ ಲೈಂಗಿಕತೆ ಮತ್ತು ಅದ್ರಿಂದ ಮಗು ಜನಿಸಿದ್ರೂ ಅಪರಾಧವನ್ನ ಕಡಿಮೆ ಮಾಡುವುದಿಲ್ಲ. ಅರ್ಜಿದಾರರು ತಾನು ದೇವಸ್ಥಾನದಲ್ಲಿ ಸಂತ್ರಸ್ತೆಯನ್ನ ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ. ಸಂತ್ರಸ್ತೆಯು ಅಪ್ರಾಪ್ತ ವಯಸ್ಕಳಾಗಿದ್ದು, ಘಟನೆಯ ಸಮಯದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರಿಂದ ಅಪರಾಧವನ್ನ ಪವಿತ್ರಗೊಳಿಸಲು ಸಾಧ್ಯವಿಲ್ಲ.