ಮುಂಬೈ: ತಂತ್ರಜ್ಞಾನ ಎಷ್ಟೇ ಮುಂದೆವರೆದರೂ ಇನ್ನೂ ಕೆಲವೊಂದು ರಾಜ್ಯಗಳಲ್ಲಿನ ಹಳ್ಳಿಗಳು ಮೂಲಭೂತ ಸೌಕರ್ಯದ ಕೊರತೆಯಿಂದ ವಂಚಿತವಾಗಿವೆ. ಅದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆಯಾಗಿದೆ.
ಮಹಾರಾಷ್ಟ್ರದ ಗ್ರಾಮಸ್ಥರ ಗುಂಪೊಂದು ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಬಟ್ಟೆಯ ಸ್ಟ್ರೆಚರ್ನಲ್ಲಿ ಕಿಲೋಮೀಟರ್ ಗಟ್ಟಲೇ ನದಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ರಸ್ತೆಗಳು ಮತ್ತು ಆಸ್ಪತ್ರೆಗಳಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಬುಡಕಟ್ಟು ಪ್ರಾಬಲ್ಯವಿರುವ ಪಾಲ್ಘರ್ನ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದೆ.
ये तस्वीर देश के सबसे विकसित राज्यों में से एक महाराष्ट्र के पालघर जिले की जव्हार तहसील की है!!
जहां इतने सालों में विकास नही पहुंचा है।
नतीजा गांववालों को एक बीमार महिला को झोली में उठाकर पैदल ही नदी पार करना पड़ा। @PalgharCEO @collectorpal @mieknathshinde @ndtvindia pic.twitter.com/cHW8jDOIR2— sunilkumar singh (@sunilcredible) July 23, 2022
ಲಕ್ಷ್ಮಿ ಘಟಾಲ್ (40) ಎಂಬ ಮಹಿಳೆ ಅಪಘಾತದಲ್ಲಿ ಗಾಯಗೊಂಡಿದ್ದರು. ಇವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಸ್ಪತ್ರೆಗೆ ಸೇರಿಸಬೇಕಿತ್ತು. ಮಹಿಳೆ ನಡೆದಾಡಲೂಸಾಧ್ಯವಾಗದ ಕಾರಣ ಅಲ್ಲಿನ ಗ್ರಾಮಸ್ಥರು ತಾತ್ಕಾಲಿಕ ಬಟ್ಟೆಯ ಸ್ಟ್ರೆಚರ್ನಲ್ಲಿ ಗ್ರಾಮಸ್ಥರು ಬಲವಾದ ನದಿಯ ಪ್ರವಾಹ ಮತ್ತು ಪರ್ವತದ ಜಾರು ಹಾದಿಯನ್ನು ದಾಟಿ ಮೂರು ಕಿಲೋಮೀಟರ್ಗಳಷ್ಟು ಹತ್ತುವಿಕೆಗೆ ನಡೆದು ಮುಖ್ಯ ರಸ್ತೆಗೆ ಅವಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಘಟನೆಯ ವಿಡಿಯೋವನ್ನು ವ್ಯಕ್ತಿಯೋರ್ವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ʼಜಪಾನಿನ ಜನರುʼ ಏಕೆ ಹೆಚ್ಚು ಕಾಲ ಬದುಕುತ್ತಾರೆ? 5 ಪ್ರಮುಖ ಕಾರಣಗಳ ʼ ಸ್ಪೋಟಕ ರಹಸ್ಯʼ ಬಹಿರಂಗ | Japanese people